ಡಾ.ರಾಜಕುಮಾರ್ ಸಿನಿಮಾದಲ್ಲಿ ಸಾಮಾಜಿಕ ಕಳಕಳಿ

ದೇವದುರ್ಗದಲ್ಲಿ ವರನಟ ಡಾ.ರಾಜಕುಮಾರ್ ಜನ್ಮದಿನ ಆಚರಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಪ್ರಮುಖರಾದ ಲಿಂಗಯ್ಯ, ಮುರುಗೇಂದ್ರ ಸ್ವಾಮಿ, ನಾಗರೆಡ್ಡಿ ಹೂಗಾರ್, ನಾಗರಾಜ ಮಸ್ಕಿ, ಸಾಬಯ್ಯ ನಾಯಕ ಇತರರಿದ್ದರು.
ದೇವದುರ್ಗದಲ್ಲಿ ವರನಟ ಡಾ.ರಾಜಕುಮಾರ್ ಜನ್ಮದಿನ ಆಚರಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್, ಪ್ರಮುಖರಾದ ಲಿಂಗಯ್ಯ, ಮುರುಗೇಂದ್ರ ಸ್ವಾಮಿ, ನಾಗರೆಡ್ಡಿ ಹೂಗಾರ್, ನಾಗರಾಜ ಮಸ್ಕಿ, ಸಾಬಯ್ಯ ನಾಯಕ ಇತರರಿದ್ದರು.
Published on
ದೇವದುರ್ಗ: ವರನಟ ಡಾ.ರಾಜಕುಮಾರ್ ನಟಿಸಿರುವ ಪ್ರತಿ ಸಿನಿಮಾದಲ್ಲೂ ಸಾಮಾಜಿಕ ಕಳಕಳಿ ಕಾಣಬಹುದು. ಅವರ ಚಲನಚಿತ್ರಗಳು ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆದಿವೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ್ ಹೇಳಿದರು. 
ಪಟ್ಟಣದ ಪಂ.ಪುಟ್ಟರಾಜ ಗವಾಯಿಗಳ ಸ್ಟುಡಿಯೋದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ವರನಟ ಡಾ.ರಾಜಕುಮಾರ್ ಜನ್ಮದಿನ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. 
ರಾಜಕುಮಾರ್ ಕೇವಲ ಮನರಂಜನೆಯ ಸಿನಿಮಾಗಳು ಮಾತ್ರವಲ್ಲ, ಐತಿಹಾಸಿಕ, ಸಾಮಾಜಿಕ ಬದಲಾವಣೆಗೆ ಪ್ರೇರಣೆ ನೀಡುವಂತಹ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಅವರ ಪ್ರತಿ ಸಿನಿಮಾ ಕೂಡ ಒಂದೊಂದು ದಂತಕಥೆ ಇದ್ದಂತೆ. ಬಂಗಾರದ ಮನುಷ್ಯ,  ಚಲಿಸುವ ಮೋಡಗಳು ಸೇರಿದಂತೆ ಅನೇಕ ಸಿನಿಮಾಗಳು ಮನುಷ್ಯನ ಬದುಕಿನಲ್ಲಿ ಬದಲಾವಣೆಗಳನ್ನು ತಂದಿವೆ ಎಂದರು. 
ಈಗಿನ ಸಿನಿಮಾಗಳಲ್ಲಿ ಅಂತಹ ಮೌಲ್ಯಗಳು ಕಾಣುತ್ತಿಲ್ಲ. ಹಿಂಸೆ, ನಕಾರಾತ್ಮಕ ಕಥೆಗಳು, ಮೌಲ್ಯವಿಲ್ಲದ ಸಿನಿಮಾಗಳು ಹೆಚ್ಚಾಗಿ ಬರುತ್ತ್ತಿವೆ. ಇಂಥ ಸಿನಿಮಾಗಳಿಂದ ಸಮಾಜದಲ್ಲಿ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಯುವ ಜನತೆ ದಾರಿ ತಪ್ಪುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಸ್ಟುಡಿಯೋ ಸಂಯೋಜಕ ಲಿಂಗಯ್ಯ, ಮುರುಗೇಂದ್ರ ಸ್ವಾಮಿ, ನಾಗರೆಡ್ಡಿ ಹೂಗಾರ್, ನಾಗರಾಜ ಮಸ್ಕಿ, ಸಾಬಯ್ಯ ನಾಯಕ, ಗೋಪಾಲ್ ನಾಯಕ, ವಸಂತ್ ಸಾವಜಿ, ಮೌನೇಶ್ ಗಾಣದಾಳ, ತಿರುಪತಿ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net