ಶಾಲೆ-ದೇವಾಲಯಗಳಲ್ಲಿ ಎಸ್‌ಐಆರ್ ಕಾರ್ಯ

ಹಟ್ಟಿ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿರುವುದು.
ಹಟ್ಟಿ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಮನೆಮನೆಗೆ ತೆರಳಿ ಪರಿಷ್ಕರಿಸಲಿ
  • ಹಟ್ಟಿಚಿನ್ನದಗಣಿ ಸಾರ್ವಜನಿಕರ ಒತ್ತಾಯ
ಹಟ್ಟಿಚಿನ್ನದಗಣಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಮತದಾರರ ಮನೆಗೆ ತೆರಳಿ ನಡೆಸುವ ಬದಲು ಪಟ್ಟಣದ ಕೆಲವೆಡೆ ದೇವಾಲಯ, ಶಾಲೆಗಳು, ಅಂಗನವಾಡಿ ಕೇಂದ್ರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಗುಂಪಾಗಿ ಸೇರಿಸಿ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದ್ದು, ಸಾರ್ವಜನಿಕರು ಶುಕ್ರವಾರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್)ವೇಳೆ ಮತಗಟ್ಟೆ ಮಟ್ಟದ ಅಽಕಾರಿಗಳು (ಬಿಎಲ್‌ಒ) ಮತದಾರರ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುವುದು, ಒಂದಕ್ಕಿತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿರುವ ಪ್ರಕರಣಗಳನ್ನು ಪತ್ತೆಹಚ್ಚಿ ಅಗತ್ಯ ಕ್ರಮಕ್ಕೆ ಶಿಪಾರಸು ಮಾಡುವುದು ಸೇರಿದಂತೆ ಮತದಾರರ ಮಾಹಿತಿಯನ್ನು ನಿಖರವಾಗಿ ಪರಿಷ್ಕರಿಸುವ ಜವಾಬ್ದಾರಿ ಹೊಂದಿದ್ದಾರೆ.
ಆದರೆ, ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಬಸವೇಶ್ವರ ದೇವಸ್ಥಾನದಲ್ಲಿ ಜನರನ್ನು ಕರೆಸಿ ದಾಖಲಾತಿ ಪರಿಶೀಲಿಸುತ್ತಿರುವುದು ಚುನಾವಣಾ ಆಯೋಗದ ಉದ್ದೇಶಕ್ಕೆ ಅನುಗುಣವಾಗಿದೆಯೇ ? ಮನೆಮನೆಗೆ ತೆರಳಿ ಪರಿಶೀಲಿಸಿದರೆ ನೈಜ ಮತದಾರರ ವಿವರ ಖಚಿತತೆಗೆ, ಸ್ಥಳಾಂತರಗೊಡವರು, ಮೃತರು ಹಾಗೂ ಒಂದಕ್ಕಿ0ತ ಹೆಚ್ಚು ಕಡೆ ಹೆಸರು ಹೊಂದಿರುವವರನ್ನು ಗುರುತಿಸಲು ಅನುಕೂಲವಾಗುತ್ತದೆ. ಆದ್ದರಿಂದ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಿಎಲ್‌ಒಗಳು ಮನೆಮನೆಗೆ ತೆರಳಿ ಪ್ರಕ್ರಿಯೆ ಕೈಗೊಳ್ಳಲು ವೆಂಕೋಬ, ಯಮನೂರ, ಅಮರೇಶ, ಭೀಮಣ್ಣ ಭಜಂತ್ರಿ, ಬಸವರಾಜ ನಾಯಕ್, ಅಮರಗುಂಡಮ್ಮ, ದೇವಕ್ಕಮ್ಮ, ರಾಮಲಿಂಗಮ್ಮ ಇತರರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net