ಆಗಸ್ಟ್ 2 ರೊಳಗೆ ಎಸ್‌ಐಆರ್ ಅಭಿಯಾನ

dc puvitha s
dc puvitha s
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಯೊಬ್ಬರು ಅಭಿಯಾನದಲ್ಲಿ ಪಾಲ್ಗೋಳಲು ಡಿಸಿ ಮನವಿ
ರಾಯಚೂರು ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯ ವೇಗವಾಗಿ ಸಾಗುತ್ತಿದ್ದು, ಆಗಸ್ಟ್ 8ರವರೆಗೆ ಅಭಿಯಾನ ಮುಂದುವರಿಯಲಿದ್ದು, ಆಗಸ್ಟ್ 04 ರೊಳಗೆ ಆನ್‌ಲೈನ್ ಅಥವಾ ಖುದ್ದಾಗಿ ಸಲ್ಲಿಸುವ ಮೂಲಕ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಪೂವಿತಾ ಎಸ್, ಮನವಿ ಮಾಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಒಟ್ಟು 15,84,491 ಎಣಿಕೆ ನಮೂನೆಗಳನ್ನು ಡಿಜಿಟೈಸೇಶನ್ ಮಾಡಲಾಗಿದ್ದು, 1,30,068 ನಮೂನೆಗಳ ಡಿಜಿಟೈಸೇಶನ್ ಇನ್ನೂ ಬಾಕಿಯಿದೆ. ಇಲ್ಲಿಯವರೆಗೆ ಶೇ.89.36 ನಮೂನೆಗಳ ಡಿಜಿಟೈಸೇಶನ್ ಪೂರ್ಣಗೊಂಡಿದ್ದು, ಒಟ್ಟಾರೆ ಶೇ.92ಕ್ಕಿಂತ ಹೆಚ್ಚು ಎಣಿಕೆ ಹಾಗೂ ವರ್ಗೀಕರಣ ಕಾರ್ಯ ಪೂರ್ಣಗೊಂಡಿದೆ. ಉಳಿದ ಶೇ.7.5ರಷ್ಟು ಎಣಿಕೆ ನಮೂನೆಗಳ ಸಂಗ್ರಹಣೆ ಮಾತ್ರ ಬಾಕಿಯಿದ್ದು, ಸಾರ್ವಜನಿಕರು ತ್ವರಿತವಾಗಿ ನಮೂನೆ ಸಲ್ಲಿಸಿದರೆ ಜಿಲ್ಲೆಯಲ್ಲಿ ಎಸ್ ಐಆರ್ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬಹುದು ಎಂದರು.
ಜಿಲ್ಲೆಯಲ್ಲಿ ’ಗೈರು, ಮೃತರು, ನಕಲಿ ಹಾಗೂ ಇತರೆ’ ವಿಭಾಗದಲ್ಲಿ ಒಟ್ಟು 2,23,737 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 4,839 ಗೈರು ಹಾಜರಾತಿ ಮತದಾರರು ಇದ್ದಾರೆ. ಇವರು ಉದ್ಯೋಗ ಅಥವಾ ಇತರೆ ಕಾರಣಗಳಿಂದ ಜಿಲ್ಲೆ ಬಿಟ್ಟು ಹೊರಗಡೆ ಹೋಗಿದ್ದರೆ, ಆಗಸ್ಟ್ 8ರೊಳಗೆ ಅಥವಾ ಸಾಧ್ಯವಾದರೆ ಈ ಭಾನುವಾರದೊಳಗೆ ಆನ್‌ಲೈನ್ ಅಥವಾ ಖುದ್ದಾಗಿ ಬಂದು ಎಣಿಕೆ ನಮೂನೆ ಸಲ್ಲಿಸುವ ಅವಕಾಶವಿದೆ ಎಂದು ತಿಳಿಸಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ 3,56,180 ನಮೂನೆಗಳನ್ನು ’ತಿದ್ದುಪಡ್ಡಿ’ ವಿಭಾಗದಲ್ಲಿ ಗುರುತಿಸಲಾಗಿದೆ. ಹೆಸರು ಹೊಂದಾಣಿಕೆಯಾಗದಿರುವುದು, ಒಂದೇ ರೀತಿಯ ದಾಖಲೆಗಳು ಕಾಣಿಸಿಕೊಳ್ಳುವುದು ಸೇರಿದಂತೆ ವಿವಿಧ ತಾಂತ್ರಿಕ ವ್ಯತ್ಯಾಸಗಳು ಇದರಲ್ಲಿ ಸೇರಿವೆ. ಇಲಾಖೆಯ ಮಟ್ಟದಲ್ಲಿ ಸಾಧ್ಯವಿರುವ ತಿದ್ದುಪಡಿಗಳನ್ನು ಮಾಡಲಾಗುವುದು. ಅಗತ್ಯ ದಾಖಲೆಗಳ ಅವಶ್ಯಕತೆ ಇದ್ದರೆ ಸಂಬಂಧಪಟ್ಟ ಮತದಾರ ಮತದಾರರಿಗೆ ನೋಟಿಸ್ ನೀಡಿ ದಾಖಲೆಗಳನ್ನು ಪಡೆದು ತಿದ್ದುಪಡಿ ಕೈಗೊಳ್ಳಲಾಗುವುದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net