ಸರಳವಾಗಿ ಮಣ್ಣೆತ್ತಿನ ಹಬ್ಬ ಆಚರಣೆ

ರಾಯಚೂರಿನ ಮಾರುಕಟ್ಟೆಯಲ್ಲಿ ಮಣ್ಣೆತ್ತಿನ ಅಮವಾಸೆ ನಿಮಿತ್ತ ಮಂಗಳವಾರ  ರಂಗುರಂಗಿನ ಮಣ್ಣೆತ್ತಿನ ಎತ್ತುಗಳನ್ನು ಮಾರಾಟ ಮಾಡಲಾಗುತ್ತಿರುವುದು.
ರಾಯಚೂರಿನ ಮಾರುಕಟ್ಟೆಯಲ್ಲಿ ಮಣ್ಣೆತ್ತಿನ ಅಮವಾಸೆ ನಿಮಿತ್ತ ಮಂಗಳವಾರ ರಂಗುರಂಗಿನ ಮಣ್ಣೆತ್ತಿನ ಎತ್ತುಗಳನ್ನು ಮಾರಾಟ ಮಾಡಲಾಗುತ್ತಿರುವುದು.
Published on
ರಾಯಚೂರು
ಉತ್ತರ ಕರ್ನಾಟಕ ಭಾಗದ ಜನರು ಮುಂಗಾರಿನಲ್ಲಿ ವಿಶೇಷವಾಗಿ ಆಚರಿಸುವ ಮಣ್ಣೆತ್ತಿನ ಹಬ್ಬವನ್ನು ನಗರ ಸೇರಿದಂತೆ ಜಿಲ್ಲಾದ್ಯಂತ ಮಂಗಳವಾರ ಸರಳವಾಗಿ ಆಚರಣೆ ಆಚರಿಸಿದರು.

ನಗರದ ನಾನಾ ಬಡಾವಣೆಗಳಲ್ಲಿ ಮಣ್ಣೆತ್ತಿನ ಹಬ್ಬದ ಅಂಗವಾಗಿ ಮಣ್ಣಿನಿಂದ ಮಾಡಿದ ಬಣ್ಣ ಬಣ್ಣದ ಎತ್ತುಗಳು ಮಾರಾಟವಾದವು. ಪ್ರಾಚೀನ ಕಾಲದಿಂದಲೂ ನಡೆದು ಬಂದ ಈ ಪದ್ದತಿ ಇದೀಗ ಆಧುನಿಕ ಸ್ವರೂಪ ಪಡೆದುಕೊಂಡಿದೆ.
ಹುತ್ತಗಳಿಂದ ತಂದ ಮಣ್ಣಿನಿಂದ ಕಲಾತ್ಮಕವಾಗಿ ಎತ್ತುಗಳನ್ನು ತಯಾರಿಸಲಾಗುತ್ತಿತ್ತು. ಇದೀಗ ತಯಾರಿಸಿದ ಎತ್ತುಗಳಿಗೆ ರಂಗು ತುಂಬಿಸುವಲ್ಲಿ ವ್ಯಾಪಾರಿಗಳು ಮುಂದಾಗುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ.
ನಗರದ ಕುಂಬಾರ ಓಣಿಯಲ್ಲಿ ಮಣ್ಣಿನ ಎತ್ತುಗಳನ್ನು ಮಾರಾಟ ಮಾಡುವುದು ಪ್ರತಿ ವರ್ಷವೂ ನಡೆದು ಬಂದಿದೆ.

ಈ ಬಾರಿ ಮಳೆಲ್ಲದೆ ರೈತರು ಆಕಾಶದತ್ತ ಮುಖ ಮಾಡಿದ್ದು, ಮಳೆಗಾಗಿ ನಿತ್ಯ ದೇವರ ಪೂಜೆ ಮಾಡುತ್ತಿದ್ದಾರೆ. ಇರದ ಮಧ್ಯಯು ಮಣ್ಣಿನಿಂದ ಎತ್ತುಗಳನ್ನು ತಂದು ಮನೆಯ ಜಗಲಿಯ ಮೇಲಿಟ್ಟು ಪೂಜೆ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net