ಸಿದ್ರಾಂಪುರ ಲೇಔಟ್‌ಗೆ ಬಂತು ಜೀವ!

ರಾಯಚೂರಿನ ಸಿದ್ರಾಂಪುರ ಲೇಔಟ್‌ನ ಹೊರನೋಟ
ರಾಯಚೂರಿನ ಸಿದ್ರಾಂಪುರ ಲೇಔಟ್‌ನ ಹೊರನೋಟ
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಅಂತದಲ್ಲಿ 135 ಜನರಿಗೆ ನಿವೇಶನ
  • 2010ರ ಅಕ್ಟೋಬರ್‌ನಲ್ಲಿ ಅರ್ಜಿ ಹಾಕಿದ್ದು
  • 15 ದಿನ ಸಮಯಾವಕಾಶ
ರಾಯಚೂರು ದಶಕಗಳಿಂದ ನೆನೆಗುದ್ದಿಗೆ ಬಿದ್ದಿದ ಸಿದ್ರಾಂಪುರ ಲೇಔಟ್‌ಗೆ ಹಣ ನೀಡಿ ಕಂಗಾಲಾಗಿದ್ದ ಜನರಿಗೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ ಮರು ಜೀವ ನೀಡಿದ್ದು, ಪೂರ್ಣ ಪ್ರಮಾಣದಲ್ಲಿ ಸರ್ಕಾರಕ್ಕೆ ಹಣ ಪಾವತಿ ಮಾಡಿದ 135 ಜನರಿಗೆ 15 ದಿನದಲ್ಲಿ ಹಂಚಿಕೆ ಮಾಡಲು ತೀರ್ಮಾನ ಮಾಡಲಾಗಿದೆ.
ನಗರದ ಹೊರವಲಯದ ಸಿದ್ರಾಂಪುರ ಗ್ರಾಮದ ರಸ್ತೆಯಲ್ಲಿ 2010ರಲ್ಲಿ 51.21 ಎಕರೆ ಪ್ರದೇಶದಲ್ಲಿ ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಲು ನಗರಾಭಿವೃದ್ದಿ ಇಲಾಖೆಯಿಂದ ಲೇಔಟ್ ನಿರ್ಮಿಸಲಾಗಿತ್ತು. 20/30, 30/40 ಹಾಗೂ 40/60 ಅಳತೆಯ 308 ನಿವೇಶನ ನಿರ್ಮಿಸಲಾಗಿತ್ತು. ಆದರೆ ನಿರ್ಮಾಣ ಮಾಡಿದ ಲೇಔಟ್ ಅವೈಜ್ಞಾನಿಕವಾಗಿರುವ ಆರೋಪ ಕೇಳಿ ಬಂದಿರುವುದರಿಂದ ಸುಮಾರು ವರ್ಷದಿಂದ ನೆನೆಗುದ್ದಿಗೆ ಬಿದ್ದಿತ್ತು. ಕಳೆದ 2024ರಲ್ಲಿ ಆರ್‌ಡಿಎ ಬೌಂಡರಿ ಫೀಕ್ಸ್ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಸಲಾಗಿತ್ತು. ಮೊದಲ ಅಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಹಣ ನೀಡಿದವರಿಗೆ ನಿವೇಶನ ನೀಡಲು ಸರ್ಕಾರ ಸೂಚನೆ ನೀಡಲಾಗಿದೆ.

ಅರ್ಜಿ ಹಾಕಿದ್ದು ಯಾವಾಗ

2010ರ ಅಕ್ಟೋಬರ್‌ನಲ್ಲಿ ಇಲಾಖೆಯು ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸಾಕಷ್ಟು ಜನ ಮುಂಗಡ ಹಣ ಪಾವತಿಸಿ ಅರ್ಜಿ ಹಾಕಿದ್ದರು. 2011ರಲ್ಲಿ ಅವರಿಗೆಲ್ಲ ನಿವೇಶನ ಹಂಚಿಕೆ ಮಾಡಿ ಪೂರ್ಣ ಹಣ ಕಟ್ಟಿಸಿಕೊಳಲಾಗಿತ್ತು. ಅದರಲ್ಲಿ 135 ಕ್ಕೂ ಹೆಚ್ಚು ಜನ ಪೂರ್ಣ ಹಣ ಪಾವತಿಸಿದ್ದರು. ಆದರೆ, ಇಲ್ಲಿ ಸುಮಾರು 29 ಎಕರೆ ಪ್ರದೇಶ ಬೆಟ್ಟಗುಡ್ಡವೇ ಇರುವ ಕಾರಣ ವಿರೋಧಗಳು ವ್ಯಕ್ತವಾದವು. ಅದನ್ನು ಸಮತಟ್ಟು ಮಾಡುವಲ್ಲಿ ಪ್ರಾಧಿಕಾರ ಕೂಡ ಕೈ ಚೆಲ್ಲಿತ್ತು. ಲೇಔಟ್‌ನಲ್ಲಿ ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತಾದರೂ ಹಂಚಿಕೆ ಪ್ರಕ್ರಿಯೆ ಮಾತ್ರ ಶುರುವಾಗಲಿಲ್ಲ.

ನನೆಗುದ್ದಿಗೆ ಕಾರಣ?

ಸಿದ್ರಾಂಪುರ ಬಡಾವಣೆ ನನೆಗುದಿಗೆ ಬೀಳಲು ಮುಖ್ಯ ಕಾರಣವೇ ಅಕಾರಿಗಳ ಅವೈಜ್ಞಾನಿಕ ನಡೆಯಾಗಿದ್ದು, ಒಟ್ಟು 51.21 ಎಕರೆ ಜಮೀನಿನಲ್ಲಿ ಬೆಟ್ಟ ಸೇರಿಸಿ ಸರ್ವೇ ಮಾಡಿದ್ದೇ ಸಮಸ್ಯೆಯಾಗಿದ್ದರಿಂದ 308 ನಿವೇಶನಗಳು ರೂಪಿಸಲು ಆಗಲೇ ಇಲ್ಲ. ಈ ಕಾರಣಕ್ಕೆ 2017ರಲ್ಲಿ ಅರ್ಜಿದಾರರಿಗೆ ಹಣ ಹಿಂಪಡೆಯುವಂತೆ ಆರ್‌ಡಿಎ ನೋಟಿಸ್ ಕೂಡ ಜಾರಿ ಮಾಡಿತ್ತು. ಆದರೆ, ಇಂದಲ್ಲ ನಾಳೆ ನಮಗೆ ನಿವೇಶನ ಸಿಗುವ ವಿಶ್ವಾಸದಲ್ಲಿ ಜನ ಹಣ ಹಿಂಪಡೆಯಲಿಲ್ಲ. ಆಯ್ಕೆಯಾದವರು ಮೊದಲ ಕಂತಿನ ಹಣ ಕೂಡ ಪಾವತಿಸಿದ್ದರು. ಉಳಿದ ಸ್ಥಳದಲ್ಲಿ ನಿವೇಶನ ನಿರ್ಮಿಸಲಾಗದ ಕಾರಣ ನನೆಗುದಿಗೆ ಬಿತ್ತು. ಪ್ರಾಧಿಕಾರ ಹಣ ಹಿಂದಿರುಗಿಸಲು ಸಿದ್ಧವಿದ್ದರೂ ಜನರ ಒಪ್ಪಿರಲಿಲ್ಲ. ಆದರೆ ಇದೀಗ ಸರ್ಕಾರವೇ ನಿವೇಶನಗಳನ್ನು ನೀಡಲು ಮುಂದಾಗಿರುವುದರಿಂದ ಹಣ ಕಟ್ಟಿದ ಸಾರ್ವಜನಿಕರು ಸಂತಸ ವ್ಯಕ್ತ ಪಡಿಸಿದ್ದಾರೆ.

15 ದಿನ ಸಮಯಾವಕಾಶ ಯಾಕೆ ?

ದಶಕಗಳಿಂದ ನೆನೆಗುದ್ದಿಗೆ ಬಿದ್ದಿದ ಸಿದ್ರಾಂಪುರ ಲೇಔಟ್‌ನಲ್ಲಿ ಗಿಡಗಂಟೆಗಳು ಬೆಳೆದು ನಿಂತಿದ್ದು, ಇದಕ್ಕಾಗಿ ಆರ್‌ಡಿಎದಿಂದ 15 ಲಕ್ಷ ರೂ. ಅನುದಾನವನ್ನು ಮೀಸಲಿಡಲಾಗಿದ್ದು, ಈ ಅನುದಾನದಲ್ಲಿ ಲೇಔಟ್ ಸ್ವಚ್ಚತೆ, ಡಿಮಾಕ್ಸ್,ಸ್ಟೋನ್ ಅಳವಡಿಕೆ, ಪೀನಿಸಿಂಗ್ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. 308 ನಿವೇಶನಗಳ ಪೈಕಿ 135 ಜನರು ಪೂರ್ಣ ಪ್ರಮಾಣದಲ್ಲಿ ಹಣವನ್ನು ಕಟ್ಟಿದ್ದು,35 ಜನ ಅರ್ಧ ಹಣ ಕಟ್ಟಿದ್ದಾರೆ. ಹಾಗೂ 143 ಜನ ಶೇ.10 ರಷ್ಟು ಮಾತ್ರ ಹಣವನ್ನು ಕಟ್ಟಿದ್ದು, ಮೊದಲ ಅಂತದಲ್ಲಿ 135 ಜನರಿಗೆ ನಿವೇಶನಗಳನ್ನು ನೀಡಲಾಗುತ್ತದೆ. ಎರಡನೇ ಅಂತದಲ್ಲಿ 35 ಜನರಿಗೆ ಹಾಗೂ ಮೂರನೇ ಅಂತದಲ್ಲಿ ಸಿದ್ರಾಂಪುರ 2ನೇ ಬಡಾವಣೆಯಲ್ಲಿ ನಿವೇಶನಗಳನ್ನು ನೀಡಲಾಗುತ್ತದೆಂದು ಇಲಾಖೆ ಮಾಹಿತಿ ನೀಡಿದೆ.

ದಶಕಗಳಿಂದ ನೆನೆಗುದ್ದಿಗೆ ಬಿದ್ದ ಸಿದ್ರಾಂಪುರ ಲೇಔಟ್‌ಗೆ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಸಚಿವರ ಸಹಕಾರದಿಂದ ಪುನರ್ಜೀವ ಬಂದಿದ್ದು, ಮೊದಲ ಅಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಹಣ ಕಟ್ಟಿದ 135 ಜನರಿಗೆ 15 ದಿನದಲ್ಲಿ ನಿವೇಶನ ನೀಡಲಾಗುತ್ತದೆ. 2ನೇ ಅಂತದಲ್ಲಿ ಅರ್ಧ ಕಟ್ಟಿದ ಸಾರ್ವಜನಿಕರಿಗೆ ನಿವೇಶನಗಳನ್ನು ಮೂಲಭೂತ ಸೌಲಭ್ಯಗಳನ್ನು ಆರ್‌ಡಿಎ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net