ರಾಯಚೂರು ಸೂರ್ಯವಂಶ ಕ್ಷತ್ರಿಯ ಕಾಟಿಕ್ ಸಮಾಜದಿಂದ ಶ್ರೀ ರಾಮನವಮಿ ಉತ್ಸವ ನಿಮಿತ್ತ ಮಾ.27 ರಂದು ಸಂಜೆ 5 ಗಂಟೆಗೆ ಶ್ರೀರಾಮನ ಶೋಭಾಯಾತ್ರೆ ಆಯೋಜಿಸಲಾಗಿದೆಂದು ಸಮಾಜ ಅಧ್ಯಕ್ಷ ಶಿವಶಂಕರ ನಿಜಾಮಕಾರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ನಗರದ ಮಂಗಳವಾರಪೇಟೆ ಭವನದಿಂದ ಶ್ರೀರಾಮ ಭಾವಚಿತ್ರದ ಶೋಭಾಯಾತ್ರೆ ಪ್ರಾರಂಭವಾಗುತ್ತದೆ. ತೀನ್ ಕಂದೀಲ್, ಬಟ್ಟೆ ಬಜಾರ, ಜೈನ್ ಮಂದಿರ, ಸೂಪರ ಮಾರ್ಕೆಟ್, ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಮೂಲಕ ಶ್ರೀರಾಮಮಂದಿರಕ್ಕೆ ಮೆರವಣಿಗೆ ಆಗಮಿಸಲಿದೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಕಾರ್ಯಾಧ್ಯಕ್ಷ ಕೆ.ಸತ್ಯನಾರಾಯಣ,ಕಾರ್ಯದರ್ಶಿ ನಾಗೇಶ ಜಗತ್ಕಾರಿ, ಶಿವರಾಮ ಸಿಂಗ್, ಯುವ ಅಧ್ಯಕ್ಷ ವಿಶಾಲ್ ಕಲ್ಯಾಣ ಕಾರಿ, ಡಾ.ತಾನೋಜಿರಾವ್ ಕಲ್ಯಾಣಕಾರಿ, ಅಶೋಕ , ನಾಗರಾಜ, ಶ್ರೀನಿವಾಸ ಪತಂಗೆ ಇದ್ದರು.