ಭತ್ತ ನಾಟಿಗೆ ಸಸಿಗಳ ಕೊರತೆ

ಸಿಂಧನೂರಿನಲ್ಲಿ ಭತ್ತದ ನಾಟಿಗೆ ಹಾಕಿದ್ದ ಸಸಿಗಳು ಬಲಿತಿರುವುದು.
ಸಿಂಧನೂರಿನಲ್ಲಿ ಭತ್ತದ ನಾಟಿಗೆ ಹಾಕಿದ್ದ ಸಸಿಗಳು ಬಲಿತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ
  • ಚಟುವಟಿಕೆಗೆ
  • ಹಿನ್ನಡೆ

ಸಿಂಧನೂರು: 

ನೀರಿನ ಲಭ್ಯತೆ ಬಗ್ಗೆ ಅನಿಶ್ಚಿತತೆ ಇದ್ದ ಹಿನ್ನೆಲೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭತ್ತದ ಸಸಿಗಳು ಸಿಗದೆ ಪರದಾಡುತ್ತಿದ್ದಾರೆ. ಜಲಾಶಯದಿಂದ ತಡವಾಗಿ ನೀರು ಹರಿಸಿರುವುದರಿಂದ ರೈತರು ಇದೀಗ ಸಸಿಗಳಿಗಾಗಿ ಹುಡುಕಾಡುವಂತಾಗಿದೆ.

ಕಳೆದ ವರ್ಷ ಅವಧಿಗೆ ಮೊದಲೇ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಹರಿದು ಬಂದಿತ್ತು. ಆಗಲೂ  ಭತ್ತ ನಾಟಿಗೆ ಸಸಿಗಳು ಲಭ್ಯವಾಗಿರಲಿಲ್ಲ. ಈಗ ತಡವಾಗಿ ನಾಲೆಗೆ ನೀರು ಬಿಟ್ಟಿರುವುದು ಮತ್ತೊಂದು ರೀತಿಯ ಸಮಸ್ಯೆಗೆ ಕಾರಣವಾಗಿದೆ. ಈ ಹಿಂದೆ ಹಾಕಿದ್ದ ಸಸಿಗಳು ಪ್ರಸ್ತುತ ನಾಟಿಗೆ ಯೋಗ್ಯವಾಗಿಲ್ಲ. ಕಳೆದ ಎರಡು ವಾರಗಳ ಹಿಂದೆ ಹಾಕಿರುವ ಸಸಿಗಳು ನಾಟಿಗೆ ಬರಲು ಇನ್ನೂ ಎರಡು ವಾರ  ಆಗಬೇಕಿದೆ. 
ತಾಲೂಕಿನಲ್ಲಿ ಮುಂಗಾರು ಈ ಬಾರಿ ದುರ್ಬಲಗೊಂಡಿದ್ದು ಜುಲೈನಲ್ಲಿ ಸ್ವಲ್ಪ ಮಳೆ ಆಗಿದೆ. ತುಂಗಭದ್ರಾ ಎಡದಂಡೆ ನಾಲೆ  ಟೇಲೆಂಡ್ ಭಾಗದ ರೈತರು ಈಗಾಗಲೇ ಬಿತ್ತನೆ ಮಾಡಿ ನೀರಿನ ಕೊರತೆಯಿಂದ ಬೆಳೆ ಕಳೆದುಕೊಂಡಿದ್ದಾರೆ. ನಾಲೆಗೆ 20 ದಿನ ತಡವಾಗಿ ನೀರು ಹರಿದು ಬಂದಿರುವುದರಿಂದ ರೈತರು ಈಗ ಹೊಲಗಳನ್ನು ನಾಟಿಗೆ ಸಿದ್ಧಪಡಿಸುತ್ತಿದ್ದಾರೆ. ಆ.25ರ ನಂತರ ನಾಟಿ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.
"

ಈ ಹಿಂದೆ ಹಾಕಿದ್ದ ಸಸಿಗಳು ಈಗ ನಾಟಿಗೆ ಯೋಗ್ಯವಾಗಿಲ್ಲ. ರೈತರು ಈಗ ಮತ್ತೆ ಸಸಿಮಡಿ ಹಾಕಿದ್ದು, ಮುಂದಿನ ದಿನಗಳಲ್ಲಿ ಭತ್ತ ನಾಟಿ ಮಾಡಲಾಗುವುದು.

— ರುದ್ರಗೌಡ ಪಾಟೀಲ್ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ, ಸಿಂಧನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net