ದೇಗುಲಗಳಲ್ಲಿ ಶಿವಭಜನೆ ಜಾಗರಣೆ

ಮುದಗಲ್‌ನ ನಗರೇಶ್ವರ ದೇಗುಲದಲ್ಲಿ ಸಹಜಸ್ಥಿತಿ ಯೋಗ ಪ್ರತಿಷ್ಠಾನದಿಂದ ಶಿವಭಜನೆ ಜರುಗಿತು.
ಮುದಗಲ್‌ನ ನಗರೇಶ್ವರ ದೇಗುಲದಲ್ಲಿ ಸಹಜಸ್ಥಿತಿ ಯೋಗ ಪ್ರತಿಷ್ಠಾನದಿಂದ ಶಿವಭಜನೆ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ಧಾರ್ಮಿಕ ಕಾರ್ಯಕ್ರಮಗಳ ಸಂಭ್ರಮ
  • ಮುದಗಲ್ ಮಹಾಶಿವರಾತ್ರಿ ಉಪವಾಸ ವ್ರತ
ಮುದಗಲ್: ಮಹಾಶಿವರಾತ್ರಿ ನಿಮಿತ್ತ ಪಟ್ಟಣದ ವಿವಿಧ ದೇಗುಲಗಳಲ್ಲಿ ಶಿವಭಜನೆ, ಜಾಗರಣೆ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.
ಸ್ಥಳೀಯ ನಗರೇಶ್ವರ ದೇಗುಲದಲ್ಲಿ ಮಹಿಳೆಯರು, ಮಕ್ಕಳು, ಯುವಕರು ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಉಪವಾಸ ವ್ರತ ಮುಗಿಸಿದರು. ನಂತರ ಸಹಜ ಸ್ಥಿತಿ ಯೋಗ ಪ್ರತಿಷ್ಠಾನದಿಂದ ನಡೆದ ಶಿವಭಜನೆ, ಶಿವಸ್ತುತಿಗಳು ಎಲ್ಲರನ್ನು ಭಕ್ತಿಯಲ್ಲಿ ತೇಲಿಸಿತು.
ಸತ್ಸಂಗದ ನಿರ್ವಾಹಕ ಸಣ್ಣ ಸಿದ್ದಯ್ಯ, ದೊಡ್ಡ ಸಿದ್ದಯ್ಯ ಮೇಗಳಪೇಟೆ, ಗದ್ದೆಪ್ಪ, ಹನುಮಂತ, ಪ್ರವೀಣ ಜೀಡಿ, ಶಿವಕುಮಾರ್, ಕೃಷ್ಣಾ, ಗಣೇಶ, ಆರ್ಯವೈಶ್ಯ ಸಮುದಾಯದ ಮುಖಂಡರಾದ ಯೋಗೇಶಪ್ಪ ಗೌರೀಪುರ, ಲಕ್ಷ್ಮೀಪತಿ ತಾವರಗೇರಿ, ಪ್ರಸನ್ನ, ಸುನೀಲ್, ವೆಂಕಟೇಶ, ನರಸಿಂಹಮೂರ್ತಿ ಇತರರಿದ್ದರು.
ಮನಸೂರೆಗೊಂಡ ದಾಸವಾಣಿ: ಮುದಗಲ್‌ನ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ರೆಹಮಾನ್‌ಸಾಬ್ ನದಾಫ್ ತಂಡದಿಂದ ಮೂರು ತಾಸು ದಾಸ ಸಾಹಿತ್ಯ, ವಚನ ಗಾಯನ, ದಾಸರ ಪದಗಳು ಭಕ್ತರನ್ನು ಮನಸೊರೆಗೊಳ್ಳುವಂತೆ ಮಾಡಿದವು. ಪ್ರಮುಖರಾದ ವಿಶ್ವೇಶ್ವರಯ್ಯ, ಬಸವರಾಜ ಹೂಗಾರ, ಯತೀಶ ಹಿರೇಮಠ, ಆದಯ್ಯಸ್ವಾಮಿ ಕವಿತಾಳ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net