ಇರಕಲ್‌ನಲ್ಲಿ ಶಿವಶಕ್ತಿ ಜಾತ್ರೋತ್ಸವ ಫೆ.15ರಿಂದ

ಬಸವಪ್ರಸಾದ ಶರಣರು
ಬಸವಪ್ರಸಾದ ಶರಣರು
Published on
ಕವಿತಾಳ: ಸಮೀಪದ ವಟಗಲ್ ಗ್ರಾಪಂ ವ್ಯಾಪ್ತಿಯ ಇರಕಲ್ ಮಠದಲ್ಲಿ ಜಗದ್ಗುರು ಶ್ರೀ ಶಿವಶಕ್ತಿ ಪೀಠದ 26ನೇ ಜಾತ್ರೆ ಅಂಗವಾಗಿ ಫೆ.15ರಿಂದ 25ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 
ಮಹಾಶಿವರಾತ್ರಿ ಅಂಗವಾಗಿ ಸಪ್ತ ಭಜನೆ, ಶಿವಶಕ್ತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಫೆ.16ರಂದು ವಿವಿಧ ಸ್ಪರ್ಧೆ, 17ರಂದು ವಟಗಲ್, ಅಮೀನಗಡ, ಕವಿತಾಳ, ಪಾಮನಕಲ್ಲೂರು, ತೋರಣದಿನ್ನಿ ಸೇರಿದಂತೆ ವಿವಿಧೆಡೆ ಮಠದಿಂದ ಸ್ವಚ್ಛಾತೆ ಆಂದೋಲನ ಮತ್ತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಾತ್ರೆ ದಿನವಾದ ಫೆ.25ರಂದು ಶಿವಶಕ್ತಿ ಮೂರ್ತಿಗೆ ಮಹಾಪೂಜೆ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ ನಂತರ 52 ಮಕ್ಕಳಿಂದ ಅಯ್ಯಚಾರ, 63 ಮಕ್ಕಳಿಂದ ಲಿಂಗದೀಕ್ಷೆ, ಇಷ್ಟಲಿಂಗಪೂಜೆ, ಆರೋಗ್ಯ ಉಚಿತ ತಪಾಸಣೆ ಶಿಬಿರ, ಸಂಗೀತ ಕಾರ್ಯಕ್ರಮ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಸಸಿಗಳ ವಿತರಣೆ, ಸುಜ್ಞಾನ ಸಂಗಮ, ಧರ್ಮಸಭೆ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ, ಸಾಮೂಹಿಕ ವಿವಾಹ, ಜಾನಪದ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಪೀಠಾಧಿಪತಿ ಬಸವಪ್ರಸಾದ ಶರಣರ ತುಲಾಭಾರ ಮತ್ತು ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
 ಸಂಜೆ 5ಗಂಟೆಗೆ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ರಥೋತ್ಸವ ಜರುಗಲಿದೆ ಎಂದು ಮಠದ ಪೀಠಾಧಿಪತಿ ಬಸವಪ್ರಸಾದ ಶರಣರು ತಿಳಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net