ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಶರಣಪ್ಪ ಹೊಸಗೌಡ್ರ ಆಯ್ಕೆಯಾದರು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಕೆಪಿಸಿಸಿ ಸದಸ್ಯ ನಲ್ಲಾ ವೆಂಕಟೇಶ್ವರಾವ್, ಜಿಪಂ ಮಾಜಿ ಸದಸ್ಯ ಹನುಮಮಂತಪ್ಪ ಮುದ್ದಾಪುರ, ಮಲ್ಲಿಕಾರ್ಜುನ ಯದ್ದಲದಿನ್ನಿ, ಗ್ಯಾರಂಟಿ ಸಮಿತಿ ಮಸ್ಕಿ ತಾಲೂಕು ಅಧ್ಯಕ್ಷ ಶೇಖ್ ಮಹಿಬೂಬಸಾಬ, ಮಲ್ಲನಗೌಡ ದೇವರಮನಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಧ್ಯಕ್ಷ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ
ಸಿಂಧನೂರು 7ನೇ ವಾರ್ಡ್ ಸದಸ್ಯ ಶರಣಪ್ಪ ಹೊಸಗೌಡ್ರು ಅವಿರೋಧ ಆಯ್ಕೆ
ಸಿಂಧನೂರು: ತುರ್ವಿಹಾಳ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ 7ನೇ ವಾರ್ಡ್ ಸದಸ್ಯ ಶರಣಪ್ಪ ಹೊಸಗೌಡ್ರು ಅವಿರೋಧವಾಗಿ ಆಯ್ಕೆಯಾದರು. ತಹಸೀಲ್ದಾರ್ ಅರುಣ್ ದೇಸಾಯಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಪಪಂನಲ್ಲಿ ಕಾಂಗ್ರೆಸ್‌ಗೆ ಬಹುಮತ ಇದ್ದು, ಅಧ್ಯಕ್ಷ ಸ್ಥಾನಕ್ಕೆ ಮೂವರ ನಡುವೆ ಪೈಪೋಟಿ ನಡೆದಿತ್ತು. ಶಾಸಕ ಆರ್.ಬಸನಗೌಡ ತುರ್ವಿಹಾಳ 30 ತಿಂಗಳ ಅಧ್ಯಕ್ಷ ಸ್ಥಾನದ ಅವಧಿಯನ್ನು ಮೂವರಿಗೆ ತಲಾ 10 ತಿಂಗಳು ನೀಡವಂತೆ ಹೇಳಿದ್ದರು. 7ನೇ ವಾರ್ಡ್‌ಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಶರಣಪ್ಪ ಹೊಸಗೌಡ್ರ ನಂತರ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಶಾಸಕ ತುರ್ವಿಹಾಳ ಶರಣಪ್ಪ ಹೊಸಗೌಡ್ರುಗೆ ಅಧ್ಯಕ್ಷ ಸ್ಥಾನದ ಭರವಸೆ ನೀಡಿದ್ದರು ಎನ್ನಲಾಗಿದೆ.