ಏ.7 ರಂದು ಶಾಂತರಸರ ನೆನಪು ಕಾರ್ಯಕ್ರಮ

RANGASWAMY
RANGASWAMY
Published on
ರಾಯಚೂರು ರಂಗಸಿರಿ ಸಾಂಸ್ಕೃತಿಕ ಕಲಾ ಬಳಗದಿಂದ ಏ.7 ರಂದು ನಗರದ ನವಯುಗ ಪದವಿ ಮಹಾವಿದ್ಯಾಲಯದಲ್ಲಿ ಶಾಂತರಸರ ನೆನಪು ಕಾರ್ಯಕ್ರಮ ಆಯೋಜಿಸಲಾಗಿದೆಂದು ಕಲಾ ಬಳಗದ ಅಧ್ಯಕ್ಷ ರಂಗಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಏಮ್ಸ್ ಹೋರಾಟಗಾರ ಡಾ.ಬಸವರಾಜ ಕಳಸ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಈರಣ್ಣ ಪೂಜಾರಿ ವಹಿಸಲಿದ್ದಾರೆ. ಹಿರಿಯ ಸಾಹಿತಿ ಬಾಬು ಬಂಡಾರಿಗಲ್ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಭೀಮನಗೌಡ ಇಟಗಿ, ಸಾಹಿತಿ ಡಾ.ರಾಜಶ್ರೀ ಕಲ್ಲೂರಕರ್, ವೆಂಕಟೇಶ ಬೇವಿನಬೆಂಚಿ ಆಗಮಿಸಲಿದ್ದಾರೆಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಂಗಪ್ಪ, ಚಂದ್ರಶೇಖರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net