ನೀಲಗಲ್‌ನಲ್ಲಿ ಜ.4 ರಿಂದ ಶಾಂಭವಿ ಶಾಂತಮಲ್ಲೇಶ್ವರ ಜಾತ್ರೋತ್ಸವ

ಡಾ.ಪಂಚಾಕ್ಷರ ಶಿವಾಚಾರ್ಯರು
ಡಾ.ಪಂಚಾಕ್ಷರ ಶಿವಾಚಾರ್ಯರು
Published on
ಅರಕೇರಾ: ತಾಲೂಕಿನ ನೀಲಗಲ್ ಶ್ರೀ ಶಾಂಭವಿ ಶಾಂತಮಲ್ಲೇಶ್ವರ ಜಾತ್ರೋತ್ಸವ ಜ.4 ರಿಂರ ಜ.13ರವರೆಗೆ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಡಾ.ಪಂಚಾಕ್ಷರ ಶಿವಾಚಾರ್ಯರು ತಿಳಿಸಿದ್ದಾರೆ. 
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಲೋಕ ಕಲ್ಯಾಣಾರ್ಥ ಜ.4ರಂದು ಮಹಾ ಚಂಡಿಕಾ ಯಾಗ, ಪ್ರತಿನಿತ್ಯ ಸಂಜೆ 6 ಗಂಟೆಯಿಂದ ಪುರಾಣ ಪ್ರವಚನ, ಜ.9 ರಂದು ಬೆ.9 ಉಚಿತ ಆರೋಗ್ಯ ಶಿಬಿರ, ಗುರು ಆರಾಧನೆ ಮತ್ತು ಅಯ್ಯಚಾರ, ಸಂಜೆ ಮಹಿಳೆಯರಿಂದ ಉಚ್ಚಾಯ ನಂತರ ದೀಪೋತ್ಸವ ನಡೆಯಲಿದೆ. 
ಜ.10ರಂದು ಬೆಳಗ್ಗೆ 8ಗಂಟೆಗೆ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ನಂತರ ಸಾಮೂಹಿಕ ವಿವಾಹ, ಸಂಜೆ ಮಹಾರಥೋತ್ಸವ ಜರುಗಲಿದೆ. ಜ.11ಕ್ಕೆ ಬೆ.9ಗಂಟೆಗೆ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ, ಸಂಜೆ 5.30ಕ್ಕೆ ಕಡುಬಿನ ಕಾಳಗ, ಜ.12ರಂದು ಬೆಳಗ್ಗೆ ಮಹಾ ಚಂಡಿಕಾ ಯಾಗ ಪೂರ್ಣಾಹುತಿ, ಸಂಜೆ ಮಕ್ಕಳಿಂದ ನೃತ್ಯೋತ್ಸವ, ಜ.13ರಂದು ಸಂಜೆ 6 ಗಂಟೆಯಿಂದ ಹಾಸ್ಯ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. 
ಸಾಮೂಹಿಕ ವಿವಾಹಕ್ಕೆ ಈಗಾಗಲೇ ನೋಂದಣಿ ಕಾರ್ಯ ಶುರುವಾಗಿದ್ದು, ವಯಸ್ಸಿನ ಪ್ರಮಾಣ ಪತ್ರ, ಶಾಲಾ ವರ್ಗಾವಣೆ ಪ್ರಮಾಣ ಪತ್ರ, ಭಾವಚಿತ್ರವಿರುವ ಶಾಲಾ ದೃಢಿಕರಣ ಪತ್ರ, ಜಾತಿ ಮತ್ತು ಆದಾಯ, ವಾಸಸ್ಥಳ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ಪಡಿತರ ಚೀಟಿ, 4 ಭಾವಚಿತ್ರ, 2 ಲಗ್ನ ಪತ್ರಿಕೆ ಸಲ್ಲಿಸಬೇಕು ಎಂದು  ಕೋರಿದ್ದಾರೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net