

ಪ್ರಮುಖ ಮುಖ್ಯಾಂಶಗಳು
ಹಿರೇರಾಯಕುಂಪಿ ಪೂರ್ತಿ ಒಳಚರಂಡಿ, ಸಿಸಿ ರಸ್ತೆ ಮಾಡಲು 2ಕೋಟಿ ರೂ. ಮಂಜೂರಾಗಿ ಟೆಂಡರ್ ಆಗಿದೆ. ಗುತ್ತಿಗೆದಾರರು ಎರಡುಕಡೆ ತಗ್ಗು ತೋಡಿ ಹಾಗೇ ಬಿಟ್ಟಿದ್ದಾರೆ. ತುರ್ತು ಕೆಲಸ ಮಾಡಲು ನೋಟಿಸ್ ನೀಡಲಾಗಿದೆ. 30ಕಡೆ ಚರಂಡಿ, ಸಿಸಿ ರಸ್ತೆ ಮಾಡಬೇಕು. ಗುತ್ತಿಗೆದಾರರಿಗೆ ಸೂಚನೆ ನೀಡಲಾಗುತ್ತದೆ. ಕೆಲಸ ಮಾಡದಿದ್ದರೆ ಬ್ಲಾೃಕ್ ಲಿಸ್ಟ್‌ಗೆ ಹಾಕಲು ಶಿಫಾರಸು ಮಾಡುತ್ತೇನೆ.
ಕರೆಮ್ಮ ನಾಯಕ ಶಾಸಕಿ ಆಗುವ ಮುನ್ನವೇ ಊರಿಗೆ ಬಂದು ಸಮಸ್ಯೆ ನೋಡಿಕೊಂಡು ಹೋಗಿದ್ದಾರೆ. ಮೊನ್ನೆ ಭೂಮಿಪೂಜೆ ಮಾಡಲು ಬಂದಾಗಲೂ ಇದೇ ಸಮಸ್ಯೆ ನೋಡಿ ಅಧಿಕಾರಿಗಳಿಗೆ ಸರಿಪಡಿಸಲು ಸೂಚಿಸಿದ್ದಾರೆ. ಆದರೆ ದಪ್ಪಚರ್ಮದ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಪಿಡಿಒ ನಮ್ಮ ಪಾಲಿಗೆ ಇದ್ದೂ ಇಲ್ಲದಂತಿದ್ದು, ಗ್ರಾಪಂ ಆಡಳಿತ ಮಂಡಳಿ ಇಲ್ಲದೆ ನಾವು ಅನಾಥರಾಗಿದ್ದೇವೆ.