ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 17,497 ವಿದ್ಯಾರ್ಥಿಗಳು ಮೊದಲ ಬಾರಿಗೆ ಪರೀಕ್ಷೆ ಬರೆದಿದ್ದು, ಈ ಪೈಕಿ ಕೇವಲ 12.967 ಜನ ವಿದ್ಯಾರ್ಥಿಗಳು ತೆರ್ಗಡೆಯಾಗಿದ್ದಾರೆ. ಈ ಪೈಕಿ 9939 ಬಾಲಕರಲ್ಲಿ 5600 ಪಾಸ್ ಅದರೆ , 11,444 ಬಾಲಕಿಯರಲ್ಲಿ 8281 ವಿದ್ಯಾರ್ಥಿನಿಯರು ಪಾಸ್ ಅಗಿದ್ದಾರೆ. ಕಳೆದ 5 ವರ್ಷದಿಂದ ಜಿಲ್ಲೆಯು ಕೇವಲ 30 ಮತ್ತು 31ನೇ ಸ್ಥಾನಕ್ಕೆ ಪೈಪೋಟಿ ನೀಡುತ್ತಿದ್ದು, ಈ ಬಾರಿಯು ಉತ್ತಮ ಅಂಕ ಗಳಿಸಿದರು,31 ನೇ ಸ್ಥಾನಕ್ಕೆ ತಲುಪಿದೆ. 2022 ರಲ್ಲಿ ಶೇ.57.94ಗಳಿಸಿ 31ನೇ ಸ್ಥಾನ ಪಡೆದರೆ, 2023ರಲ್ಲಿ ಶೇ.66.22 ರಷ್ಟು ಫಲಿತಾಂಶಗಳಿಸಿ 31ನೇ ಸ್ಥಾನ ಪಡೆಯಲಾಗಿತ್ತು. 2024 ರಲ್ಲಿ ಶೇ.73.11ರಷ್ಟು ಗಳಿಸಿದರು 30ನೇ ಸ್ಥಾನ ಪಡೆದು, 2025 ರಲ್ಲಿ ಶೇ.58.75ರಷ್ಟು ಗಳಿಸಿ 30 ನೇ ಸ್ಥಾನ ಪಡೆದು, ಈ ಬಾರಿ ಶೇ.74.11 ರಷ್ಟು ಫಲಿತಾಂಶ ಪಡೆದು 31 ನೇ ಸ್ಥಾನ ಪಡೆದಿದೆ.