ಜಿಲ್ಲೆಯಲ್ಲಿ ಇಂಧನಕ್ಕಾಗಿ ಪರದಾಟ

ರಾಯಚೂರಿನ ಬಂಕ್‌ನಲ್ಲಿ ಇಂಧನ ಇಲ್ಲದೆ ಬಂದ್ ಮಾಡಲಾಗಿರುವುದು.
ರಾಯಚೂರಿನ ಬಂಕ್‌ನಲ್ಲಿ ಇಂಧನ ಇಲ್ಲದೆ ಬಂದ್ ಮಾಡಲಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್ ಅಳವಡಿಕೆ
  • ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ದಟ್ಟಣೆ
ರಾಯಚೂರು ಮಧ್ಯ ಪ್ರಾಚ್ಯದೇಶಗಳಲ್ಲಿ ಯುದ್ಧಗಳು ಪ್ರಾರಂಭವಾಗಿದ್ದಗಿನಿಂದ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ಗಾಗಿ ಜನರು ಪರದಾಟವಾಡುತ್ತಿದ್ದು, ಈಚೇಗೆ ಇಂಧನ ಬೆಲೆ ಏರಿಕೆಯಿಂದ ನಿರ್ವಹಣೆ ಕೊರತೆಯಿಂದ ಹಲವು ಬಂಕ್‌ಗಳ ಮುಂದೆ ನೋ ಸ್ಟಾಕ್ ಬೋರ್ಡ್‌ಗಳು ಕಾಣಿಸಿಕೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ಕಳೆದ ಕೆಲವು ದಿನಗಳಿಂದ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ದೊರೆಯದೇ ಹೋಗಬಹುದು ಎಂಬ ಭೀತಿಯಿಂದ ವಾಹನ ಸವಾರರು ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇಂಧನ ಸಂಗ್ರಹಿಸಲು ಮುಂದಾಗುತ್ತಿದ್ದಾರೆ. ಇದರ ಪರಿಣಾಮವಾಗಿ ಹಲವೆಡೆ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ.
ಇನ್ನೊಂದೆಡೆ ಜಿಲ್ಲಾಡಳಿತದ ಆದೇಶದಂತೆ ಬಾಟಲ್, ಕ್ಯಾನ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಹಾಕದಂತೆ ಸೂಚನೆ ನೀಡಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಈ ಕೈಗೊಳ್ಳಲಾಗಿದ್ದರೂ, ರೈತರು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸುವ ಟ್ರಾಕ್ಟರ್ ಮಾಲೀಕರು, ಜೆಸಿಬಿ ಹಾಗೂ ಇತರೆ ಯಂತ್ರೋಪಕರಣಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಲಗಳಲ್ಲಿ ಕಾರ್ಯನಿರ್ವಹಿಸುವ ಯಂ ತ್ರಗಳಿಗೆ ಇಂಧನ ತುಂಬಿಸಿಕೊಳ್ಳಲು ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಾಹನವನ್ನು ನೇರವಾಗಿ ಬಂಕ್‌ಗೆ ತರಲು ಸಾಧ್ಯವಾಗದ ಕಾರಣ ಇಂಧನ ಪೂರೈಕೆಯಲ್ಲಿ ತೊಂದರೆ ಎದುರಾಗುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ರೈತರು ಇಂಜಿನ್ ಮೂಲಕ ಜಮೀನುಗಳಿಗೆ ನೀರು ಹರಿಸಲು ಡೀಸೆಲ್ ಅವಶ್ಯವಿದ್ದು, ಡೀಸೆಲ್ ಕ್ಯಾನ್ ಗಳಿಗೆ ಹಾಕಿದ ಪರಿಣಾಮ ತೊಂದರೆಗೆ ಸಿಲುಕಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net