ಸ್ಕೌಟ್ಸ್-ಗೈಡ್ಸ್‌ನಿಂದ ಮೂಡಲಿದೆ ಶಿಸ್ತು-ಕ್ರಿಯಾಶೀಲತೆ

ಸಿಂಧನೂರಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಹಮ್ಮಿಕೊಂಡಿದ್ದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಸ್ಕೌಟ್ ಮಾಸ್ಟರ್ ಸಿದ್ದಪ್ಪ ಬಸರಕೋಡ ಅವರನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಪರಿವೀಕ್ಷಕ ಸೋಮಲಿಂಗಪ್ಪ ಯು.ವಿ., ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಸ್.ಶರಣೇಗೌಡ, ಗೈಡ್ ಕ್ಯಾ.ಬಸಮ್ಮ ಹಿರೇಮಠ, ದೈಹಿಕ ಶಿಕ್ಷಣ ಶಿಕ್ಷಕಿ ಮಹಾದೇವಮ್ಮ, ಕಬ್ಸ್ ಮಾಸ್ಟರ್ ಕವಿತಾ ಇತರರಿದ್ದರು.
ಸಿಂಧನೂರಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಹಮ್ಮಿಕೊಂಡಿದ್ದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಸ್ಕೌಟ್ ಮಾಸ್ಟರ್ ಸಿದ್ದಪ್ಪ ಬಸರಕೋಡ ಅವರನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಪರಿವೀಕ್ಷಕ ಸೋಮಲಿಂಗಪ್ಪ ಯು.ವಿ., ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಸ್.ಶರಣೇಗೌಡ, ಗೈಡ್ ಕ್ಯಾ.ಬಸಮ್ಮ ಹಿರೇಮಠ, ದೈಹಿಕ ಶಿಕ್ಷಣ ಶಿಕ್ಷಕಿ ಮಹಾದೇವಮ್ಮ, ಕಬ್ಸ್ ಮಾಸ್ಟರ್ ಕವಿತಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೈಹಿಕ ಶಿಕ್ಷಣ ಪರಿವೀಕ್ಷಕ ಸೋಮಲಿಂಗಪ್ಪ ಅಭಮತ
  • ಸಿಂಧನೂರು ದೇಶಭಕ್ತಿ ಗೀತ ಗಾಯನ ಸ್ಪರ್ಧೆ
ಸಿಂಧನೂರು: ವಿದ್ಯಾರ್ಥಿಗಳಲ್ಲಿ ಸಂಗೀತದ ಮೇಲೆ ಆಸಕ್ತಿ ಹೆಚ್ಚಿಸುವ ಕೆಲಸವಾಗಬೇಕು ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ಸೋಮಲಿಂಗಪ್ಪ ಯು.ವಿ. ಆಶಯ ವ್ಯಕ್ತಪಡಿಸಿದರು.
ಇಲ್ಲಿನ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯಿಂದ ಕಬ್ಸ್, ಬುಲ್ ಬುಲ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಶಿಸ್ತು ಮತ್ತು ಕ್ರಿಯಾಶೀಲತೆ ಬೆಳೆಯುತ್ತದೆ ಎಂದರು.
ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಎಸ್.ಶರಣೇಗೌಡ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ವ್ಯಕ್ತಿತ್ವ ವಿಕಸನವಾಗುತ್ತದೆ. ಈ ಹಿಂದೆ ಸ್ಕೌಟ್ಸ್-ಗೈಡ್ಸ್ ಕೇವಲ ಅಧ್ಯಕ್ಷ, ಕಾರ್ಯದರ್ಶಿಗಳ ಜವಾಬ್ದಾರಿ ಹೊಂದಿ ಕಾರ್ಯನಿರ್ವಹಿಸುತ್ತಿದ್ದೆವು. ಇತ್ತೀಚೆಗೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಬೀರಪ್ಪ ಶಂಭೋಜಿ, ಸಹ ಕಾರ್ಯದರ್ಶಿ ಶಂಕರದೇವರು ಹಿರೇಮಠ, ವಕೀಲ ಬಸವರಾಜ, ಗೈಡ್ ಕ್ಯಾ.ಬಸಮ್ಮ ಹಿರೇಮಠ ಎಲ್ಲರೂ ಸೇರಿ ಉತ್ತಮವಾಗಿ ಚಟುವಟಿಕೆಗಳನ್ನು ಮಾಡುತ್ತಿರುವುದು ತುಂಬ ಸಂತೋಷವಾಗಿದೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ಬೀರಪ್ಪ ಶಂಭೋಜಿ, ದೇಶಭಕ್ತಿ ಗೀತಗಾಯನದ ಮಹತ್ವ ತಿಳಿಸಿದರು. ಶ್ರೀಕೃಷ್ಣದೇವರಾಯ, ಕನಕದಾಸ, ಅರಗಿನಮರದ ಜ್ಞಾನ ಜ್ಯೋತಿ ಪಬ್ಲಿಕ್ ಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ, ವಿರುಪಾಪುರ ಸರ್ಕಾರಿ ಪ್ರೌಢ ಶಾಲೆ, ದುಗ್ಗಮ್ಮನಗುಂಡ ಸರ್ಕಾರಿ ಶಾಲೆಯ ಮಕ್ಕಳು ಗೀತಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಕೌಟ್ ಮಾಸ್ಟರ್ ಸಿದ್ದಪ್ಪ ಬಸರಕೋಡ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಶಂಕರದೇವರು ಹಿರೇಮಠ, ಗೈಡ್ ಶ್ವೇತಾ ಗೊರವರ, ಕ್ಯಾ.ಬಸಮ್ಮ ಹಿರೇಮಠ, ದೈಹಿಕ ಶಿಕ್ಷಣ ಶಿಕ್ಷಕಿ ಮಹಾದೇವಮ್ಮ, ಕಬ್ಸ್ ಮಾಸ್ಟರ್ ಕವಿತಾ, ಸಂಗೀತ ಶಿಕ್ಷಕಿ ಪ್ರತಿಮಾ, ರಾಜ್ಯ ಯುವ ಪ್ರಶಸ್ತಿ ವಿಜೇತ ಬಸವರಾಜ ಗಸ್ತಿ, ಸ್ಕೌಟ್ ಮಾಸ್ಟರ್ ಬೀರಪ್ಪ ಮಾಡಗೇರಿ, ಸಿದ್ದಪ್ಪ ಬಸರಕೋಡ್, ದೈಹಿಕ ಶಿಕ್ಷಣ ಶಿಕ್ಷಕ ಶರಣಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net