- ಶಾಲೆಗೆ ಮೂಲಭೂತ ಸೌಲಭ್ಯವಿಲ್ಲ
- 266 ಶಾಲೆಗಳಲ್ಲಿ ಏಕ ಶಿಕ್ಷಕರು!
- ಮೂಲಭೂತ ಸೌಲಭ್ಯಗಳ ಅವಶ್ಯಕತೆ
ರಾಯಚೂರು ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿ ಹೊಂದಿದ ರಾಯಚೂರು ಜಿಲ್ಲೆಗೆ ಪ್ರತಿ ವರ್ಷ ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನ ಜತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಾದೆ ಎಂದು ಆಡಳಿತ ನಡೆಸುವ ಸರ್ಕಾರ ಹೇಳುತ್ತಿದ್ದು, ಆದರೆ ಇದುವರೆಗೆ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನೀಗಿಸಲು ಮಾತ್ರ ಸಾಧ್ಯವಾಗದೆ ಇರುವುದು ಶೋಚನೀಯ ಸಂಗತಿಯಾಗಿದೆ.
ಜಿಲ್ಲೆಯಲ್ಲಿ ಮೇ.30 ರಿಂದ ಶಾಲೆಗಳು ಆರಂಭಗೊಳ್ಳುತ್ತಿದ್ದು, ಶೇ 50ರಷ್ಟು ಶಿಕ್ಷಕರ ಕೊರತೆಯೂ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಸಮಸ್ಯೆಯಾಗುವುದೆಂಬುವುದು ಜನಸಾಮಾನ್ಯರ ಆರೋಪವಾಗಿದೆ.
ಜಿಲ್ಲೆಯಲ್ಲಿ ಎಷ್ಟು ಶಿಕ್ಷಕರ ಕೊರತೆ
ಜಿಲ್ಲೆಯಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಸೇರಿದಂತೆ ಒಟ್ಟು 1782 ಶಾಲೆಗಳು ಸೇರಿ 10699 ಹುದ್ದೆಗಳಿದ್ದು, ಈ ಪೈಕಿ 3396 ಹುದ್ದೆಗಳು ಕಾರ್ಐ ನಿರ್ವಹಣೆ ಮಾಡಲಾಗುತ್ತಿದ್ದು,5624 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದರ ಜತೆಗೆಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಸುಮಾರು 800ಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆಯಾಗುವ ಸಾಧ್ಯತೆಗಳಿವೆ. ಇರುವ ಶಿಕ್ಷಕರಲ್ಲಿ ಮತ್ತಷ್ಟು ಶಿಕ್ಷಕರು ಕಡಿಮೆಯಾಗುತ್ತದೆ.
ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಶಿಕ್ಷಕರು ಹಾಗೂ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಅವಶ್ಯಕವಾಗಿದೆ. ಆದರೆ, ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೇಲೂ ಪರಿಣಾಮ ಬೀಳುವ ಸಾಧ್ಯತೆಗಳಿಗೆ ಎಂಬುವುದು ಪೋಷಕರು ಆತಂಕ ವ್ಯಕ್ತಪಡಿಸುತ್ತಾರೆ. ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಕೊರತೆಯ ಹಿನ್ನೆಲೆಯಲ್ಲಿ ಪ್ರೌಢಶಾಲಾ ಶಿಕ್ಷಕರನ್ನೇ ನಿಯೋಜಿಸಿ ಕಾರ್ಯ ನಿರ್ವಹಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಸುಪ್ರೀಂಕೋರ್ಟ್‌ಗೆ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ಬಗ್ಗೆ ಮಾಹಿತಿಯನ್ನು ಶಿಕ್ಷಣ ಇಲಾಖೆ ಸಲ್ಲಿಸಿದೆ. ಆದರೆ ನಂತರ ದಿನಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಶೌಚಾಲಯಗಳ ಪ್ರಮಾಣವೂ ಹೆಚ್ಚಿನ ಪ್ರಮಾಣದಲ್ಲಿ ಮಾಡುವ ಬಗ್ಗೆ ಸಮೀಕ್ಷೆಯನ್ನು ನಡೆಸಿಲ್ಲ ಎಂಬ ಆರೋಪ ಶಿಕ್ಷಣ ಇಲಾಖೆಯ ಮೇಲಿದೆ. ಈ ಪೈಕಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಒಟ್ಟು 4812 ಶೌಚಾಲಯಗಳಿದ್ದು, ಈ ಪೈಕಿ 3938 ಮಾತ್ರ ಬಳಕೆಗಿದ್ದು, 874 ಪಾಳುಬಿದ್ದಿವೆ. ಜತೆಗೆ ಶಿಕ್ಷಣ ಇಲಾಖೆಯಿಂದ 2286 ಶೌಚಾಲಯಗಳನ್ನು ನಿರ್ಮಾಣ ಮಾಡಲು ಜಿಪಂಗೆ ಮನವಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಲ್ಲಿ ವಿಷಯ ಪರಿವೀಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಪ್ರೌಢಶಾಲಾ ಶಿಕ್ಷಕರನ್ನೇ ನಿಯೋಜನೆ ಮಾಡಲಾಗುತ್ತಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಸಮಸ್ಯೆಯಾಗುತ್ತಿದೆ.
266 ಶಾಲೆಗಳಲ್ಲಿ ಏಕ ಶಿಕ್ಷಕರು!
ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಏಕ ಶಾಲ ಶಿಕ್ಷಕರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈ ಬಾರಿಮ 266 ಶಾಲೆಗಳಲ್ಲಿ ಏಕ ಶಿಕ್ಷಕರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಈ ಪೈಕಿ ದೇವದುರ್ಗ ತಾಲೂಕಿನಲ್ಲಿ 59 ,ಲಿಂಗಸುಗೂರು 66, ಮಾನ್ವಿ 55, ರಾಯಚೂರು 54, ಸಿಂಧನೂರು 52 ಶಾಲೆಗಳಲ್ಲಿ ಏಕ ಶಿಕ್ಷಕರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ತಪ್ಪುತ್ತಿಲ್ಲ ಕೊಠಡಿ ಸಮಸ್ಯೆ!
ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಪ್ರತಿ ವರ್ಷ ಕಲ್ಯಾನ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಹೊಸ ಕೊಠಡಿಗಳ ನಿರ್ಮಾಣಕ್ಕೆ ಶಾಲೆಯ ಶಿಕ್ಷಕರಿಂದ ಮಾಹಿತಿ ಪಡೆಯಲಾಗುತ್ತಿದೆ. ಆದರೆ ಹೊಸ ಕೊಠಡಿ ಮಾತ್ರ ನಿರ್ಮಾಣ ಮಾಡುತ್ತಿಲ್ಲ. ಜಿಲ್ಲೆಯ 1782 ಶಾಲೆಗಳಲ್ಲಿ ಒಟ್ಟು 10,846 ಕೊಠಡಿಗಳಲ್ಲಿ 7450 ಮಾತ್ರ ಬಳಕೆಗೆ ಲಭ್ಯವಿದ್ದು, 2009 ಕೊಠಡಿಗಳಳನ್ನು ನೆಲ ಸಮಗೊಳಿಸಲಾಗಿದೆ. ಉಳಿದ 1387 ಕೊಠಡಿಗಳನ್ನು ರಿಪೇರಿ ಮಾಡಲಾಗುತ್ತಿದೆ. ಆದರೆ ಮಕ್ಕಳ ಅನುಪಾತದಲ್ಲಿ 1688 ಕೊಠಡಿಗಳನ್ನು ನಿರ್ಮಾಣ ಮಾಡಲು ಶಾಲಾ ಶಿಕ್ಷಣ ಇಲಾಖೆ ಮನವಿ ಮಾಡಲಾಗಿದೆ.
ಸಮವಸ್ತ್ರ ,ಪುಸ್ತಕ ಬಂದಿಲ್ಲ
ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 1ರಿಂದ 10 ತರಗತಿಯಲ್ಲಿ ಒಟ್ಟು 2,40,860 ವಿದ್ಯಾರ್ಥಿಗಳು ಅಭ್ಯಾಸ ಮಾಡಲಾಗುತ್ತಿದ್ದು, ಆದರೆ ಪ್ರಸ್ತುತ ಸಾಲಿನಲ್ಲಿ ಶಾಲೆ ಪ್ರಾರಂಭಿಸಲು ಕೇವಲ ಒಂದು ವಾರ ಮಾತ್ರ ಸಮಯ ಬಾಕಿದ್ದು, ಆದರೆ ಇದುವರೆಗೆ ಕೇವಲ ಸಿಂಧನೂರು ತಾಲೂಕಿನಲ್ಲಿ 6 ರಿಂದ 8 ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಸಮವಸ್ತ್ರ ಬಂದಿದ್ದು, ಉಳಿದ ಯಾವುದೇ ತಾಲೂಕಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ಮಾತ್ರ ವಿತರಣೆ ಮಾಡಿಲ್ಲ. ಆದರೆ ಶಾಲೆಯ ಶಿಕ್ಷಕರು ಹಳೆ ವಿದ್ಯಾರ್ಥಿಗಳಿಂದ ಪಠ್ಯ ಪುಸ್ತಕ ಪಡೆದು ಮಕ್ಕಳಿಗೆ ವಿತರಣೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ಶಿಕ್ಷಣಕ್ಕೆ ಯಾವುದೇ ಸಮಸ್ಯೆಯಾಗದಂತೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಯಾವ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಸರಿಪರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.ಆದರಂತೆ ಕಳೆದ ವರ್ಷಗಿಂತ ಈ ಭಾರಿ ಹೆಚ್ಚಿನ ಪ್ರಮಾಣದಲ್ಲಿ ಪಲಿತಾಂಶ ಪಡೆಯಲಾಗುತ್ತದೆ.
ಎಸ್.ಮಲ್ಲಿಕಾರ್ಜುನ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ರಾಯಚೂರು.
ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಮಧ್ಯಯು ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 21 ನೇ ಸ್ಥಾನ ಪಡೆಯಲಾಗಿದೆ. ಮಕ್ಕಳ ದಾಖಲಾತಿಒ ಹೆಚ್ಚಳಕ್ಕಾಗಿ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗಿತ್ತಿದೆ. ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುತ್ತದೆ.
ಈಶ್ವರ ಕುಮಾರ ಕಾಂದೊ ಜಿಪಂ ಸಿಇಓ ರಾಯಚೂರು