ಗೋಮರ್ಸಿ ಉರ್ದು ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉದ್ಯಮಿ ಎಸ್. ನರೇಶ ರಾಮಾಕ್ಯಾಂಪ್ ಅವರಿಂದ ಸ್ಕೂಲ್ ಬ್ಯಾಗ್, ಪೆನ್ ಸೇರಿದಂತೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಸಂಸ್ಥಾಪಕ ಅಶೋಕ ನಲ್ಲಾ, ವನಸಿರಿ ಫೌಂಡೇಷನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ, ಪುನೀತ್ ಆಶ್ರಮದ ಪಂಪಯ್ಯಸ್ವಾಮಿ, ಮಹಿಳಾ ಮುಖಂಡರಾದ ದಾಕ್ಷಾಯಿಣಿ ಮಾಲಿಪಾಟೀಲ ಇದ್ದರು.
ಸಿಂಧನೂರು: ಗೋಮರ್ಸಿ ಉರ್ದು ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಹಾಗೂ ವನಸಿರಿ ಫೌಂಡೇಷನ್ ಮತ್ತು ಉದ್ಯಮಿ ಎಸ್. ನರೇಶ ರಾಮಾಕ್ಯಾಂಪ್ ಅವರ ಆಶ್ರಯದಲ್ಲಿ ಸ್ಕೂಲ್ ಬ್ಯಾಗ್, ಪೆನ್, ಪರೀಕ್ಷಾ ಪ್ಯಾಡ್ ಮತ್ತು ನೋಟ್ ಬುಕ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಸಂಸ್ಥಾಪಕ ಅಶೋಕ ನಲ್ಲಾ ಮಾತನಾಡಿ, ಶಿಕ್ಷಕರ ದಿನಾಚರಣೆ ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಮಕ್ಕಳಿಗೆ ಶಿಕ್ಷಕರಿಂದ ಮಕ್ಕಳಿಗೆ ಅವಶ್ಯಕ ಇರುವ ಕಲಿಕೋಪಕರಣ ವಿತರಿಸುವ ಕಾರ್ಯ ಮಾಡಲಾಗಿದೆ.
ಶಿಕ್ಷಕರ ದಿನಾಚರಣೆ ಹಿನ್ನೆಲೆ ಶಿಕ್ಷಕರನ್ನು ಗೌರವಿಸುವ ಕಾರ್ಯ ದೇಶದ ಪ್ರತಿಯೊಬ್ಬರೂ ಮಾಡಬೇಕು ಎಂದರು. ವನಸಿರಿ ಫೌಂಡೇಷನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ, ಪುನೀತ್ ಆಶ್ರಮದ ಪಂಪಯ್ಯಸ್ವಾಮಿ, ಮಹಿಳಾ ಪ್ರಮುಖ ದಾಕ್ಷಾಯಿಣಿ ಮಾಲೀಪಾಟೀಲ್, ಕೆ.ನಿರುಪಾದಿ ಗೋಮರ್ಸಿ ಇತರರಿದ್ದರು.