ಸಾವಿತ್ರಿಬಾಯಿ ಫುಲೆ ಜೀವನ ಮಾದರಿ

ಗುಡದೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕಿ ನೇತ್ರಾವತಿ ಹಿರೇಮಠ, ಶಿಕ್ಷಕಿಯರಾದ ಸಂಪತ್, ಕೃಷ್ಣಕುಮಾರಿ, ಗದ್ದೆಮ್ಮ ಉಪ್ಪಾರ, ಶ್ರೀದೇವಿ ದಿವಟರ ಇತರರಿದ್ದರು.
ಗುಡದೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿ ಆಚರಿಸಲಾಯಿತು. ಮುಖ್ಯಶಿಕ್ಷಕಿ ನೇತ್ರಾವತಿ ಹಿರೇಮಠ, ಶಿಕ್ಷಕಿಯರಾದ ಸಂಪತ್, ಕೃಷ್ಣಕುಮಾರಿ, ಗದ್ದೆಮ್ಮ ಉಪ್ಪಾರ, ಶ್ರೀದೇವಿ ದಿವಟರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ
  • ಹಿರಿಯ
  • ಪ್ರಾಥಮಿಕ ಶಾಲೆ
ಮಸ್ಕಿ: ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರು ಬಾಲ್ಯ ವಿವಾಹ, ಸತಿ ಸಹಗಮನ, ವಿಧವೆ ಕೇಶ ಮುಂಡನೆ ವಿರುದ್ಧ ಹೋರಾಡಿದವರು ಎಂದು ಮುಖ್ಯಶಿಕ್ಷಕಿ ನೇತ್ರಾವತಿ ಹಿರೇಮಠ ಹೇಳಿದರು.
ತಾಲೂಕಿನ ಗುಡದೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರ ಸಬಲೀಕರಣ, ಶಿಕ್ಷಣಕ್ಕಾಗಿ ಪತಿ ಜ್ಯೋತಿಬಾ ಫುಲೆ ಅವರೊಂದಿಗೆ ಹೋರಾಡಿದರು.
ಲಿಂಗ ಮತ್ತು ಜಾತಿ ಆಧಾರದಲ್ಲಿ ನಡೆಯುತ್ತಿದ್ದ ತಾರತಮ್ಯವನ್ನು ನಿರ್ಮೂಲನೆ ಮಾಡಲು ಶ್ರಮಿಸಿದರು. ಸಾವಿತ್ರಿ ಬಾಯಿ ಫುಲೆ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡರೆ ಗುಣಮಟ್ಟದ ಶಿಕ್ಷಣದ ಆಶಯ ಮತ್ತು ಮಹಿಳಾ ಸಬಲೀಕರಣ ಕನಸು ನನಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಂದ ಹೂವಿನ ಸಸಿಗಳನ್ನು ನೆಡಲಾಯಿತು. ಮಕ್ಕಳು ಸಾವಿತ್ರಿಬಾಯಿ ಫುಲೆ ಅವರ ವೇಷಭೂಷಣ ಧರಿಸಿ ನೋಡುಗರ ಗಮನ ಸೆಳೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net