ತೊಗಲುಗೊಂಬೆ ಆಟ ಉಳಿಸಿ-ಬೆಳೆಸಿ

 ಪಗಡದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೊಗಲುಗೊಂಬೆಯಾಟ ಕಾರ್ಯಾಗಾರ ನಡೆಯಿತು. ಅಂತಾರಾಷ್ಟ್ರೀಯ ಕಲಾವಿದ ಮಲ್ಲಿಕಾರ್ಜುನ, ಮುಖ್ಯಶಿಕ್ಷಕಿ ಗಿರಿಜಾ, ಶಿಕ್ಷಕ ಶ್ರೀನಿವಾಸ, ವೀರಗಾಸೆ ಕಲಾವಿದ ಬಸವರಾಜ ಇದ್ದರು.
ಪಗಡದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೊಗಲುಗೊಂಬೆಯಾಟ ಕಾರ್ಯಾಗಾರ ನಡೆಯಿತು. ಅಂತಾರಾಷ್ಟ್ರೀಯ ಕಲಾವಿದ ಮಲ್ಲಿಕಾರ್ಜುನ, ಮುಖ್ಯಶಿಕ್ಷಕಿ ಗಿರಿಜಾ, ಶಿಕ್ಷಕ ಶ್ರೀನಿವಾಸ, ವೀರಗಾಸೆ ಕಲಾವಿದ ಬಸವರಾಜ ಇದ್ದರು.
Published on
ಸಿಂಧನೂರು: ಅಳಿವಿನ ಅಂಚಿನತ್ತ ಸಾಗುತ್ತಿರುವ ಜಾನಪದ ಕಲೆಗಳಲ್ಲಿ ಒಂದಾದ ತೊಗಲುಗೊಂಬೆಯಾಟವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಮುಂದಿನ ಪೀಳಿಗೆಗೆ ಒಂದು ಕಲೆಯಾಗದೆ, ಬದುಕು ಕಲಿಸುವ ದಾರಿಯಾಗಬೇಕು ಎಂದು ಅಂತಾರಾಷ್ಟ್ರೀಯ ತೊಗಲುಗೊಂಬೆಯಾಟ ಕಲಾವಿದ ಮತ್ತು ಮನುಕುಲ ಆಶ್ರಮ ಟ್ರಸ್ಟ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಹೇಳಿದರು. 
ಪಗಡದಿನ್ನಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತೊಗಲುಗೊಂಬೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. 
ಜಾನಪದ ಕಲೆ ಮುಂದಿನ ಪರಂಪರೆಗೆ ಬುನಾದಿ ಹಾಕುವ ಮತ್ತು ಇನ್ನೂ ವಿಜೃಂಭಣೆಗೊಳಿಸುವಲ್ಲಿ ಸರ್ಕಾರ ಇಚ್ಛಾಶಕ್ತಿ ತೋರಬೇಕು. ಜನಪದ ಕಲಾವಿದರು ಶಾಲಾ ಮಕ್ಕಳಿಗೆ ಉಚಿತವಾಗಿ ಕಲೆಗಳನ್ನು ಕಲಿಸಲು ಮನಸ್ಸು ಮಾಡಬೇಕು. ಸಾರ್ವಜನಿಕರು ಕಲಾವಿದರನ್ನು ಪ್ರೋತ್ಸಾಹಿಸಬೇಕು. ಜನಪದ ಕಲೆಗಳನ್ನು ಶಾಲೆಯಲ್ಲಿ ಅಣಿಗೊಳಿಸುವ ಮೂಲಕ ಸಮೃದ್ಧಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. 
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕಿ ಗಿರಿಜಾ ಮಾತನಾಡಿ, ಇಂದಿನ ದಿನಮಾನಗಳಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಮಕ್ಕಳಿಗೆ ಪರಿಚಯ ಮಾಡುವಂತಹ ಕೆಲಸವನ್ನು ಸರ್ಕಾರ ಮತ್ತು ಕಲಾವಿದರು ಮಾಡಬೇಕು ಎಂದು ತಿಳಿಸಿದರು. ಬಳಿಕ ತೊಗಲುಗೊಂಬೆ ತಯಾರಿಸುವುದು ಮತ್ತು ಪ್ರದರ್ಶನ ನೀಡುವ ಕುರಿತು ಮಾಹಿತಿ ನೀಡಲಾಯಿತು. ಶಿಕ್ಷಕ ಶ್ರೀನಿವಾಸ, ವೀರಗಾಸೆ ಕಲಾವಿದ ಬಸವರಾಜ, ರಂಗಭೂಮಿ ಕಲಾವಿದ ಎಂ.ಗುಂಡಪ್ಪ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net