ಆ.18 ರಂದು ಸಣ್ಣಗೌಡಸಾನಿ ನಾಟಕ ಪ್ರದರ್ಶನ

ವೇಣುಗೋಪಾಲ
ವೇಣುಗೋಪಾಲ
Published on

ರಾಯಚೂರು

ಹಿರಿಯ ಸಾಹಿತಿ ದಿ.ಶಾಂತರಸ ರಚಿಸಿರುವ ಕಾದಂಬರಿ ಆಧಾರಿತ ಸಣ್ಣಗೌಡಸಾನಿ ನಾಟಕ ಪ್ರದರ್ಶನವು ಆ.18 ರಂದು ಸಂಜೆ 6;30 ಕ್ಕೆ ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆಯೋಜನೆ ಮಾಡಲಾಗಿದೆಂದು ಮುಖಾಮುಖಿ ರಂಗ ಸಂಸ್ಥೆಯ ಅಧ್ಯಕ್ಷ ವೇಣುಗೋಪಾಲ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಹೈದ್ರಾಬಾದ ಕರ್ನಾಟಕದ ಭಾಗದಲ್ಲಿ ಗ್ರಾಮೀಣ ಬದುಕು, ಸಾಮಾಜಿಕ ವ್ಯವಸ್ಥೆ, ರಾಜಕೀಯ ಆರ್ಥಿಕ ಸ್ಥಿತಿಗತಿ ಅನಾವರಣಗೊಳಿಸಿರುವ ಸಣ್ಣಗೌಡಸಾನಿ ಕಾದಂಬರಿಯನ್ನು ಮಹಾಂತೇಶ ನವಲಕಲ್ ರಂಗರೂಪ ನೀಡಿದ್ದಾರೆ.

ಪ್ರವೀಣರೆಡ್ಡಿ ಗುಂಜಳ್ಳಿ ರಂಗಪಠ್ಯ ಹಾಗೂ ವಿನ್ಯಾಶ ಸಿದ್ದಪಡಿಸಿ ನಿರ್ದೇಶನ ಮಾಡಿದ್ದಾರೆ. ನಾಟಕವನ್ನು ಹಿರಿಯ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಡಾ.ಬಸವರಾಜ ಕಳಸ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ.ಸುಜಾತ ಜಂಗಮಶೆಟ್ಟಿ ವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಂಗಸ್ವಾಮಿ, ನರಸಿಂಹ, ಚಂದ್ರಶೇಖರ ದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net