ಸಜ್ಜಲಗುಡ್ಡ ಶರಣಮ್ಮ ಅಧ್ಯಯನ ಪೀಠ ಸ್ಥಾಪಿಸಿ

ಮುದಗಲ್ ಸಮೀಪದ ಸಜ್ಜಲಗುಡ್ಡದಲ್ಲಿ ಮಂಗಳವಾರ ಏರ್ಪಡಿಸಿದ್ದ 525ನೇ ಶಿವಾನುಭವ ಗೋಷ್ಠಿಯನ್ನು ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು ಉದ್ಘಾಟಿಸಿದರು. ಗುಡದೂರಿನ ನೀಲಕಂಠಯ್ಯ ತಾತ, ಸಜ್ಜಲಗುಡ್ಡದ ದೊಡ್ಡಬಸವಾರ್ಯ ತಾತ, ಕೊಪ್ಪಳ ವಿವಿ ಉಪಕುಲಪತಿ ಎಸ್.ವಿ. ಡಾಣಿ ಇತರರಿದ್ದರು.

Published on
ಮುದಗಲ್: ಸಮೀಪದ ಸಜ್ಜಲಗುಡ್ಡದ ಮಠದ ಸಭಾಂಗಣದಲ್ಲಿ ಮಂಗಳವಾರ 525ನೇ ಶಿವಾನುಭವ ಗೋಷ್ಠಿ ಶ್ರದ್ಧಾಭಕ್ತಿಯಿಂದ ಜರುಗಿತು. 
ಗೋಷ್ಠಿ ಉದ್ಘಾಟಿಸಿ ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು ಮಾತನಾಡಿ, ಈ ಭಾಗದಲ್ಲಿ ಸಜ್ಜಲಗುಡ್ಡದ ಶರಣಮ್ಮ ಮಹಾತಾಯಿ ಅನೇಕ ಪವಾಡಗಳ ಮೂಲಕ ಭಕ್ತರ ಹಿತ ಕಾಪಾಡಿದ್ದಾರೆ ಎಂದರು. 
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಪ್ಪಳ ವಿವಿ ಕುಲಪತಿ ಪ್ರೊ.ಎಸ್.ವಿ.ಡಾಣಿ ಅವರಿಗೆ ಶ್ರೀಮಠದ ಪ್ರಸಾದ ನಿಲಯದ ಹಳೇ ವಿದ್ಯಾರ್ಥಿಗಳ ಒಕ್ಕೂಟವು ಕೊಪ್ಪಳ ವಿವಿಯಲ್ಲಿ ಶರಣಮ್ಮ ತಾಯಿ ಹೆಸರಲ್ಲಿ ಅಧ್ಯಯನ ಪೀಠ ಸ್ಥಾಪಿಸುವಂತೆ ಮನವಿ ಸಲ್ಲಿಸಿತು. 
ಉಪನ್ಯಾಸಕ ಪರಮೇಶ್ವರ ಸಾಲಿಮಠ, ನಿವೃತ್ತ ಪ್ರಾಚಾರ್ಯ ಎಸ್.ವಿ.ಪಾಟೀಲ್, ಹಳೇ ವಿದ್ಯಾರ್ಥಿಗಳ ಸಂಘಟನೆಯ ಕರಿವೀರಯ್ಯ ಸ್ವಾಮಿ ಹಿರೇಮಠ, ಎಸ್.ಬಿ.ಹಿರೇಮಠ, ವಿರುಪಣ್ಣ ಆಲ್ಕೋಡ್, ರಾಮಲಿಂಗಪ್ಪ ಚಂದನಕೇರಿ, ಸಂಗನಗೌಡ ಪಾಟೀಲ್, ಬಸನಗೌಡ ಬುಕನಟ್ಟಿ, ಬಸವರಾಜ ಕನ್ನಾರಿ, ಗುರುಸಂಗಪ್ಪ ಇಳಕಲ್, ಬಸವಂತಯ್ಯ ಹಿರೇಮಠ, ಶೇಖರಪ್ಪ ಅಲ್ಕೋಡ್, ಶರಣಪ್ಪ ಮಾಟೂರು, ಶಿವಬಸಯ್ಯ ವಿರಕ್ತಮಠ ಇದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net