ದೇವದುರ್ಗ: ಗ್ರಾಮೀಣ ಕ್ರೀಡೆಗಳಾದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ, ಉಸುಕಿನಚೀಲ, ಕಲ್ಲುಗುಂಡು ಎತ್ತುವ ಸ್ಪರ್ಧೆ, ಜೋಡೆತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಮ್ಮ ಸಂಸ್ಕೃತಿಯ ಸಂಕೇತವಾಗಿದ್ದು, ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಚಿಂತಲಕುಂಟಾದ ಪ್ರಭುಕುಮಾರೇಶ್ವರ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಂತಲಕುಂಟಾ ಗ್ರಾಮದಲ್ಲಿ ಮಹಾಶಿವರಾತ್ರಿ ಜಾಗರಣೆ ನಿಮಿತ್ತ ಆಯೋಜಿಸಿದ್ದ ಎತ್ತುಗಳಿಂದ ಭಾರದಕಲ್ಲು ಎಳೆಯುವ ಸ್ಪರ್ಧೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಸೋಮವಾರ ಮಾತನಾಡಿದರು. ಯುವಕರು ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಶಿವರಾತ್ರಿ ನಿಮಿತ್ತ ಸ್ಪರ್ಧೆ ಆಯೋಜಿಸಿ ರೈತರಿಗೆ ಹುಮ್ಮಸ್ಸು ತುಂಬುತ್ತಿರುವುದು ಉತ್ತಮ ಕೆಲಸ ಎಂದರು.
ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ 21 ಸಾವಿರ ರೂ., 15 ಸಾವಿರ ರೂ. ಹಾಗೂ 10 ಸಾವಿರ ರೂ. ಬಹುಮಾನ ನೀಡಿ ಗೌರವಿಸಲಾಯಿತು.