ಸಮುದಾಯಭವನಕ್ಕೆ 25ಲಕ್ಷ ರೂ. ಮಂಜೂರು

ಲಿಂಗಸುಗೂರು ಹೂಗಾರ ಸಮುದಾಯ ಭವನ ಭೂಮಿಪೂಜೆಯನ್ನು ಶಾಸಕ ಮಾನಪ್ಪ ವಜ್ಜಲ ನೆರವೇರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ ಲೆಕ್ಕಿಹಾಳ, ಗಿರಿಮಲ್ಲನಗೌಡ ಪಾಟೀಲ, ಕೆ.ನಾಗಭೂಷಣ, ವೆಂಕನಗೌಡ ಐದನಾಳ, ಲಿಂಗಣ್ಣ ದೇವಿಕೇರಿ, ಮುದಕಪ್ಪ ನಾಯಕ, ವಿಶ್ವನಾಥ ಹೂಗಾರ, ಮಲ್ಲಪ್ಪ ಹೂಗಾರ, ಮಂಜುನಾಥ ಹೂಗಾರ, ಶಿವಮಹಾಂತೇಶ, ವೆಂಕಟೇಶ ಹೂಗಾರ ತಿಮ್ಮಾಪೂರ, ಶರಣಬಸವ ಹೂಗಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಭವನ
  • ಕಟ್ಟಡದ
  • ಭೂಮಿಪೂಜೆ

ಲಿಂಗಸುಗೂರು: ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಹೂಗಾರ ಸಮಾಜ ಚಿಕ್ಕದಾದರೂ ಅವರ ಸಾಧನೆ ಬಹುದೊಡ್ಡದು ಎಂದು ಶಾಸಕ ಮಾನಪ್ಪ ವಜ್ಜಲ ಹೇಳಿದರು.

ಪಟ್ಟಣದಲ್ಲಿ ಹೂಗಾರ ಸಮಾಜದ ಸಮುದಾಯ ಭವನ ಕಟ್ಟಡದ ಭೂಮಿಪೂಜೆ ಶನಿವಾರ ನೆರವೇರಿಸಿ ಮಾತನಾಡಿದರು.
ಕೆಕೆಆರ್‌ಡಿಬಿ ಅನುದಾನದಲ್ಲಿ ಸಮುದಾಯಭವನಕ್ಕೆ 25ಲಕ್ಷ ರೂ. ಮಂಜೂರಾಗಿದೆ. ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ತಾಲೂಕಿನಲ್ಲಿ 35 ಹಳ್ಳಿಗಳು ನೀರಾವರಿಯಿಂದ ವಂಚಿತವಾಗಿವೆ.
ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದರೂ ಗಮನ ಹರಿಸುತ್ತಿಲ್ಲ. ಲಿಂಗಸುಗೂರು, ಹಟ್ಟಿ, ಮುದಗಲ್ಲ ಪಟ್ಟಣಗಳಿಗೆ ಕುಡಿಯುವ ನೀರೊದಗಿಸುವಂತೆ ಕೈ ಮುಗಿದು ಕೇಳಿದರೂ ಹಣ ಇಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಮುಂಗಾರು ಬೆಳೆ ಹಾಳಾಗಿ ಬರಬಂದರೂ ಪರಿಹಾರ ನೀಡುತ್ತಿಲ್ಲ.
ತಾಲೂಕಿನ ಮಹಿಳೆಯರಿಗೆ ಉದ್ಯೋಗ ಕೊಡಲು ಗಾರ್ಮೆಂಟ್ ಫ್ಯಾಕ್ಟರ್ ಆರಂಭಿಸಲು ಸ್ವಂತ ಜಮೀನು ನೀಡುವುದಾಗಿ ಹೇಳಿದರೂ ರಾಜ್ಯ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ಆರ್‌ಎಸ್‌ಎಸ್‌ಗೆ ನೂರು ವರ್ಷಳ ಇತಿಹಾಸವಿದೆ. ನಿನ್ನೆ ಮೊನ್ನೆ ಹುಟ್ಟಿದವರು ಆರ್‌ಎಸ್‌ಎಸ್ ಬ್ಯಾನ್ ಮಾಡುತ್ತೇವೆ ಎಂದು ಹೇಳುತ್ತಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net