ಸದ್ಯ ರಾಯಚೂರಿನ ದುದಬಿನ್ ಟಾಕರ್ಸಿ ಶಾಲೆ ಆವರಣ, ವಿದ್ಯಾನಗರ ಉದ್ಯಾನವನ, ಸಿಯಾತಲಾಬ್‌ನ ನ್ಯೂ ಅಮೃತಾ ಅಸ್ಪತ್ರೆ ಎದುರು, ತಿಮ್ಮಾಪೂರ ಪೇಟೆಯ ಮಾರಮ್ಮದೇವಿ ದೇವಸ್ಥಾನದ ಎದುರಿಗೆ, ಮಡ್ಡಿಪೇಟೆ ಟ್ಯಾಂಕ್ ಬಳಿ, ನಿಜಲಿಂಗಪ್ಪ ಕಾಲೋನಿ, ಎಲ್‌ಬಿಎಸ್ ನಗರದ ಸಿಎಂಸಿ ಕ್ವಾರ್ಟರ್ಸ್ ಬಳಿ, ವಾರ್ಡ್ ನಂ.1ರ ಬಾಲಭವನದ ಬಳಿ ಸೇರಿ 11 ಕಡೆಗೆ ಆರ್‌ಆರ್‌ಆರ್ ಕೇಂದ್ರಗಳ ಆರಂಭಿಸಲಾಗಿದೆ. ಮುಂದಿನ ತಿಂಗಳೊಳಗೆ ಎಲ್ಲ ವಾರ್ಡ್‌ಗಳಲ್ಲಿ ಆಯಾ ಕಟ್ಟಿನ ಸ್ಥಳದಲ್ಲಿ ಇಂತಹ ಕೇಂದ್ರಗಳ ಆರಂಭಿಸಲು ಸಿದ್ದತೆ ನಡೆದಿದೆ.
ಹಳೆ ವಸ್ತುಗಳ ಸಂಗ್ರಹ
ನಗರದಲ್ಲಿ ಸದ್ಯ ಸ್ಥಾಪಿಸಲಾಗಿರುವ ಆರ್‌ಆರ್‌ಆರ್ ಕೇಂದ್ರಗಳಲ್ಲಿ ಬಳಸಿದ ಹಳೆಯ ಬಟ್ಟೆ, ಪ್ಲಾಸ್ಟಿಕ್ ಕೈಚೀಲ, ಬಾಟಲ್, ಗಾಜಿನ ಬಾಟಲ್ ಕಬ್ಬಿಣದ ವಸ್ತುಗಳು, ಇ-ತ್ಯಾಜ್ಯ, ಪುಸ್ತಕ, ಪತ್ರಿಕೆಗಳು, ಮಕ್ಕಳು ಬಳಸದೆ ಬಿಸಾಡಿದ ಆಟಿಕೆ ಸಾಮಾನು,ಲೋಹದ ತಾಜ್ಯ, ಮಿಶ್ರ ಪ್ಲಾಸ್ಟಿಕ್ ವಸ್ತುಗಳು, ಹಳೆಯ ಪಾದರಕ್ಷೆ, ಹಳೆಯದಾದ ಏರಕೂಲರ್, ಫ್ರೀಜ್, ಬ್ಯಾಗ್ ಅಲಂಕಾರಿಕ ವಸ್ತುಗಳು, ತೆಂಗಿನ ಕಾಯಿ ಪೀಚು ಹೀಗೆ ಏನೆಲ್ಲ ಒಣದಾದ ಮರು ಬಳಕೆಗೆ ಬರುವ ವಸ್ತುಗಳನ್ನು ಸಂಗ್ರಹಿಸುತ್ತಿದ್ದು ಸಾರ್ವಜನಿಕರು ಆ ಕೇಂದ್ರಗಳಿಗೆ ತಲುಪಿಸಬಹುದಾಗಿದೆ.