ಛಾವಣಿಯ ಪದರು ಬಿದ್ದು, ಕೂಡಲೇಳೆಯಲ್ಲಿ ಪಾರು

ರಾಯಚೂರಿನ ಬಾಲಕರ ಪದವಿ ಪೂರ್ವ ಕಾಲೇಜಿನ ಕೊಠಡಿಯಲ್ಲಿ ಛತ್ತಿನ ಪದರು ಬಿದ್ದಿರುವುದು.
ರಾಯಚೂರಿನ ಬಾಲಕರ ಪದವಿ ಪೂರ್ವ ಕಾಲೇಜಿನ ಕೊಠಡಿಯಲ್ಲಿ ಛತ್ತಿನ ಪದರು ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ನೂತನ ಕಟ್ಟಡಕ್ಕೆ ವಿದ್ಯಾರ್ಥಿಗಳ ಪ್ರತಿಭಟನೆ
  • ಭಯದಲ್ಲಿ ವಿದ್ಯಾರ್ಥಿಗಳು

ರಾಯಚೂರು

ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಛಾವಣಿಯ ಪದರು ಉದುರಿ ಬಿದ್ದು, ಕೂದಲೇಳೆಯಲ್ಲಿ ವಿದ್ಯಾರ್ಥಿಗಳು ಪ್ರಾಣಪಾಯದಿಂದ ಪಾರಾಗಿರುವ ಘಟನೆ ಗುರುವಾರ ನಡೆದಿದೆ.

ಕಾಲೇಜಿನ ವಾಣಿಜ್ಯ ವಿಭಾಗದ ಕೊಠಡಿಯಲ್ಲಿ ವಿದ್ಯಾರ್ಥಿಗಳು ಪಾಠ ಕೇಳುವ ಸಂದರ್ಭದಲ್ಲಿ ಏಕಾಏಕಿ ಛತ್ತಿನ ಪದರು ಉದುರಿದ್ದು, ವಿದ್ಯಾರ್ಥಿಗಳು ಭಯಭೀತರಾಗಿ ಹೊರ ಬಂದಿದ್ದಾರೆ. ಕಟ್ಟಡವನ್ನು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ 1996ರ ಆ.15ರಂದು ನಿರ್ಮಿಸಲಾಗಿದ್ದು, ಅಂದಿನ ಜವಳಿ ಖಾತೆ ಸಚಿವರಾಗಿದ್ದ ಎಂ.ಎಸ್.ಪಾಟೀಲ್ ಅವರು ಈ ಕಟ್ಟಡದ ಉದ್ಘಾಟನಾ ಕಾರ್ಯವನ್ನು ನೆರವೇರಿಸಿದ್ದರು.

ಸುಮಾರು 30 ವರ್ಷದ ಕಟ್ಟಡದ ಒಟ್ಟು ಒಂಭತ್ತು ಕೊಠಡಿಗಳಲ್ಲಿ ನಾಲ್ಕೈದು ಕೊಠಡಿಗಳು ಮಳೆ ಬಂದಾಗಲೆಲ್ಲಾ ಸೋರುತ್ತಿವೆ. ಈಗಾಗಲೇ ಅಲ್ಲಲ್ಲಿ ಮೇಲ್ಚಾವಣಿ ಕುಸಿದು ಬಿದ್ದಿದೆ. ತರಗತಿ ಕೋಣೆಗಳು, ಉಪನ್ಯಾಸಕರ ಕೊಠಡಿಯಲ್ಲಿ ಎಲ್ಲೆಂದರಲ್ಲಿ ಮೇಲ್ಚಾವಣಿ ಪದರು ಕುಸಿದಿದ್ದು ಜೀವ ಭಯ ಹುಟ್ಟಿಸುವಂತ ಪರಸ್ಥಿತಿ ನಿರ್ಮಾಣವಾಗಿದೆ.

ಪ್ರತೀ ವರ್ಷ ಕಲಾ,ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಸುಮಾರು 400 ರಿಂದ 500 ವಿದ್ಯಾರ್ಥಿಗಳು ಓದುತ್ತಿದ್ದು, ಕಟ್ಟಡ ಮಾತ್ರ ಮಳೆ ಬಂದಾಗಲೆಲ್ಲಾ ಭಯ ಹುಟ್ಟಿಸುತ್ತಿದೆ.

ಈ ಕುರಿತು ಕಾಲೇಜಿನ ಪ್ರಾಚಾರ್ಯರು ಹಲವು ಬಾರಿ ಶಿಕ್ಷಣ ಇಲಾಖೆ, ಜಿಲ್ಲಾಧಿಕಾರಿಗಳು ಹಾಗೂ ಶಾಸಕರಿಗೆ, ಸಚಿವರಿಗೆ ಹೊಸ ಕಟ್ಟಡ ನಿರ್ಮಾಣ ಮಾಡುವ ಕುರಿತು ಪ್ರಸ್ತಾವನೆಯನ್ನು ಕಳಿಸುತ್ತಾ ಬಂದಿದ್ದು, ಆದರೆ ಈವರೆಗೂ ಕಟ್ಟಡ ನಿರ್ಮಾಣಕ್ಕೆ ಅನುಮೋಧನೆ ಸಿಕ್ಕಿಲ್ಲವೆಂದು ರೋಧನೆ ವ್ಯಕ್ತಪಡಿಸಿದರು.

ತರಗತಿಯಲ್ಲಿ ಛತ್ತು ಉದುರಿ ನಡೆದ ಅಪಘಾತವನ್ನು ಖಂಡಿಸಿ, ಕಾಲೇಜು ವಿದ್ಯಾರ್ಥಿಗಳು ತರಗತಿಯನ್ನು ಬಹೀಷ್ಕರಿಸಿ, ಎಐಡಿಎಸ್‌ಓ ನೇತೃತ್ವದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ, ಶಿಕ್ಷಣ ಇಲಾಖೆಯ ವಿರುದ್ಧ ಧಿಡೀರ್ ಪ್ರತಿಭಟನೆ ನಡೆಸಿ ಹೊಸ ಕೊಠಡಿ ಗಳ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಘಟನೆ ಮಾಹಿತಿ ಪಡೆದ ತಹಸೀಲ್ದಾರ್ ಸುರೇಶ ವರ್ಮಾ ಕಾಲೇಜಿಗೆ ಭೇಟಿ ನೀಡಿ ತರಗತಿಗಳ ಕೊಠಡಿ ಪರಿಶೀಲನೆ ನಡೆಸಿ ಈ ಕುರಿತಂತೆ ವರದಿ ಸಲ್ಲಿಸುವಂತೆ ಸ್ಥಳದಲ್ಲಿದ್ದ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸುಮಾರು 30 ವರ್ಷದ ಕಟ್ಟಡವು ಶಿಥಿಲಗೊಂಡಿದ್ದು, ಜೀವ ಭಯದಿಂದ 450 ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಈ ಕುರಿತು ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಅನೇಕ ಭಾರಿ ಸಚಿವರಿಗೆ,ಶಾಸಕರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ.

ಡಾ.ರವಿಂದ್ರ ಬಂಡಿ ಪ್ರಚಾರ್ಯ ಬಾಲಕರ ಪಿಯು ಕಾಲೇಜು ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net