ಕತ್ತಲಲ್ಲಿ ಮುಳುಗಿದ ರೋಡಲಬಂಡಾ

ರೋಡಲಬಂಡಾ ಗ್ರಾಮದಲ್ಲಿ ಕೆಟ್ಟಿರುವ ವಿದ್ಯುತ್ ಪರಿವರ್ತಕ.
ರೋಡಲಬಂಡಾ ಗ್ರಾಮದಲ್ಲಿ ಕೆಟ್ಟಿರುವ ವಿದ್ಯುತ್ ಪರಿವರ್ತಕ.
Published on
ಹಟ್ಟಿಚಿನ್ನದಗಣಿ: ಸಮೀಪದ ರೋಡಲಬಂಡಾ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಮೂರು ದಿನ ಕಳೆದರೂ ಈವರೆಗೆ ಬದಲಿಸಿಲ್ಲ. ಇದರಿಂದ ಇಡೀ ಗ್ರಾಮದಲ್ಲಿ ಕತ್ತಲಲ್ಲಿ ಮುಳುಗಿದ್ದು, ಕುಡಿವ ನೀರಿಗೂ ಹಾಹಾಕಾರ ಉಂಟಾಗಿ ಜನರು ಪರದಾಡುವಂತಾಗಿದೆ. 
ಬುಧವಾರ ರಾತ್ರಿ ಸುರಿದ ಮಳೆಗೆ ಟಿಸಿ ಸುಟ್ಟಿದೆ. ಆದರೆ, ಜೆಸ್ಕಾಂ ಅಧಿಕಾರಿಗಳು ತಾತ್ಕಾಲಿಕ ಟ್ರಾನ್ಸ್‌ಫಾರ್ಮರ್ ಸಹ ಅಳವಡಿಸದೆ ನಿರ್ಲಕ್ಷೃ ತೋರಿದೆ. ಇದರಿಂದ ನೀರಿನ ಪಂಪ್‌ಗಳು ಬಂದ್ ಆಗಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಕುಡಿವ ನೀರಿಗಾಗಿ ಬಿಸಿಲಲ್ಲಿ 2 ಕಿಮೀ ದೂರ ನಡೆದು ಹೊಲದ ಕೆರೆ ನೀರು ಹೊತ್ತು ತರುವಂತಾಗಿದೆ. ತಕ್ಷಣವೇ ಟಿಸಿ ದುರಸ್ತಿ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ, ಸೋಮವಾರ ಹಟ್ಟಿ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. 
"

ವಿದ್ಯುತ್ ಪರಿವರ್ತಕ ಹಾಳಾಗಿದ್ದರಿಂದ ರೋಡಲಬಂಡಾ ಗ್ರಾಮದಲ್ಲಿ ಕುಡಿವ ನೀರಿಗೆ ತೊಂದರೆ ಉಂಟಾಗಿದೆ. ಈಗಾಗಲೇ ಜೆಸ್ಕಾಂ ಅಧಿಕಾರಿಗಳಿಗೆ ಟಿಸಿ ಅಳವಡಿಸಲು ಸೂಚಿಸಿದ್ದೇನೆ. ಕರೆಂಟ್ ಬಂದರೆ ಮೇಲ್ತೊಟ್ಟಿಗೆ ನೀರು ತುಂಬಿಸಿ ಸರಬರಾಜು ಮಾಡಲಾಗುವುದು.

— ಪಂಪನಗೌಡ ಎಡಿ, ಪಂಚಾಯತ ರಾಜ್, ಲಿಂಗಸುಗೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net