ರಾಯಚೂರಿನ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಶನಿವಾರ ವಾಹನ ಚಾಲಕರಿಗೆ ಮೋಟಾರ್ ವಾಹನ ನಿರೀಕ್ಷಕ ರಾಕೇಶ ಎಂ. ಚಾಲಕರಿಗೆ ಊಟದ ಕಿಟ್‌ಗಳನ್ನು ವಿತರಿಸಿದರು. ಇಲಾಖೆಯ ಚಾಲಕ ರಫೀಕ್, ಗೃಹ ರಕ್ಷಕ ಸಿಬ್ಬಂದಿ ಕಿರಣ್,ರವಿ ಇದ್ದರು.
Published on:
Copied
Follow Us
ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಶನಿವಾರ ವಾಹನ ಚಾಲಕರಿಗೆ ವಿಶೇಷ ರಸ್ತೆ ಸುರಕ್ಷತಾ ಜಾಗೃತಿ ಮೂಡಿಸಲಾಯಿತು.
ಮೋಟಾರ್ ವಾಹನ ನಿರೀಕ್ಷಕ ರಾಕೇಶ ಎಂ. ಚಾಲಕರಿಗೆ ಊಟದ ಕಿಟ್‌ಗಳನ್ನು ವಿತರಿಸಿ ಮಾತನಾಡಿ, ದೇಶವು ತನ್ನ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ, ಸಾರಿಗೆ ಇಲಾಖೆಯು ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜಾಗೃತಿ ಜತೆಗೆ ಚಾಲಕರಿಗೆ ಊಟದ ಕಿಟ್‌ಗಳನ್ನು ವಿತರಿಸಿ ಗೌರವಿಸಲಾಗುತ್ತದೆ.
ಚಾಲಕರಿಗೆ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸದಿರಲು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಿರಲು ಹಾಗೂ ಸುರಕ್ಷಿತ ವೇಗವನ್ನು ಕಾಯ್ದುಕೊಳ್ಳಲು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಇಲಾಖೆಯ ಚಾಲಕ ರಫೀಕ್, ಗೃಹ ರಕ್ಷಕ ಸಿಬ್ಬಂದಿ ಕಿರಣ್,ರವಿ ಇದ್ದರು.