ಕೆಕೆಆರ್‌ಡಿಬಿ ಯೋಜನೆಯಡಿ ಅಂದಾಜು 5 ಕೋಟಿ ರೂ. ಅನುದಾನದಲ್ಲಿ ಡಾಂಬರೀಕರಣ ರಸ್ತೆ, ಎರಡು ಬದಿ ಚರಂಡಿ, ಡಿವೈಡರ್, ಸಿಟಿ ಲೈಟ್ ನಿರ್ಮಾಣದ ಕಾಮಗಾರಿ ಕೈಗೆತ್ತಿಗೊಳ್ಳಲಾಗಿದೆ. ಕಳೆದ ಎರಡು ತಿಂಗಳಿಂದ ಕಾಮಗಾರಿ ಕುಂಟುತ್ತ ಸಾಗಿರುವುದರಿಂದ ವಾಹನ ಸವಾರರು, ಪಾದಚಾರಿಗಳ ಜತೆಗೆ ರಸ್ತೆ ಅಗೆದು ಬಿಟ್ಟಿರುವುದರಿಂದ ಮುಖ್ಯರಸ್ತೆಯ ಅಂಗಡಿಗಳ ವ್ಯಾಪಾರಸ್ಥರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ. ಅಂಗಡಿ ಮುಂದೆಯೇ ಅಗೆದಿರುವುದರಿಂದ ಗ್ರಾಹಕರು ಹೋಗಿ ಬರಲು ದಾರಿ, ವಾಹನಗಳನ್ನು ನಿಲ್ಲಿಸಲು ಸೂಕ್ತ ಸ್ಥಳವಿಲ್ಲವಾಗಿದೆ.