ರಸ್ತೆ ನಿರ್ಮಾಣ ಶೀಘ್ರ ಪೂರ್ಣಗೊಳಿಸಲಿ

ಲಿಂಗಸುಗೂರು ಸಹಾಯಕ ಆಯುಕ್ತರಿಗೆ 12ನೇ ವಾರ್ಡ್ ನಿವಾಸಿಗಳು ಮನವಿಪತ್ರ ಸಲ್ಲಿಸಿದರು. ಪ್ರಮುಖರಾದ ಬಸವರಾಜ ಗೋಸ್ಲೆ, ಅಭಿಷೇಕ, ಆನಂದ, ವೀರೇಶ, ಸಿದ್ದು, ರಾಹುಲ್, ಮಾರುತಿ, ಕೃಷ್ಣಾ, ರಹೀಮ ಅಲಿ, ಶಂಕರರೆಡ್ಡಿ, ದೇವರಾಜ, ತಿಪ್ಪರಾಜ, ಅಮೀನ್, ಜಾವೀದ ಪಾಷಾ, ಮದನ, ಇಮಾಮ, ಮಂಜುನಾಥ, ಅಲ್ತಾಫ್, ಸುಂದರ, ಬಸವ, ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಾಮಗಾರಿ
  • ಪೂರ್ಣಗೊಳಿಸದೆ
  • ಅರ್ಧಕ್ಕೆ
ಲಿಂಗಸುಗೂರು: ಪಟ್ಟಣದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ನಿರ್ಮಾಣ ಮಾಡುತ್ತಿರುವ ಸಿಸಿ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ 12ನೇ ವಾರ್ಡ್ ನಿವಾಸಿಗಳು ಸೋಮವಾರ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಅವರಿಗೆ ಮನ ಸಲ್ಲಿಸಿದರು.
ರಸ್ತೆ ಅಗೆದು ಹಲವು ಕಡೆ ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಲಾಗಿದೆ. ಸಂಬಂಧಪಟ್ಟ ಕೆಆರ್‌ಐಡಿಎಲ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ರಸ್ತೆ ನಿರ್ಮಾಣ ಮಾಡಲು ಹಣಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. 12ನೇ ವಾರ್ಡ್ ಕೊರವರ ಓಣಿ, ಗೌಳಿಪುರ ರಸ್ತೆ ನಿರ್ಮಾಣ ಮಾಡಲು ಡಾಂಬರ್ ರಸ್ತೆ ಅಗೆದು ಬಿಡಲಾಗಿದೆ. 4 ತಿಂಗಳು ಕಳೆದರೂ ಕಾಮಗಾರಿ ಆರಂಭಿಸಿಲ್ಲ.
ಇಲ್ಲಿನ ನಿವಾಸಿಗಳು ಸಂಚಾರಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ. ಅಸ್ತಮಾ, ಕೆಮ್ಮು, ದಮ್ಮು ರೋಗದಿಂದ ಬಳಲುತ್ತಿದ್ದಾರೆ. ಪುರಸಭೆಯವರೂ ಗಮನ ಹರಿಸಿಲ್ಲ. ಚರಂಡಿ ತುಂಬ ಕೊಳಚೆ ನೀರು ತುಂಬಿ ರಸ್ತೆಗೆ ಹರಿಯುತ್ತಿವೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಸತ್ಯಾಗ್ರಹ ನಡೆಸಲಾಗುವುದು ಎಂದು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net