ನೆಲಕ್ಕುದುರಿದ ಭತ್ತದ ಕಾಳು

ಸಿರವಾರ: ತಾಲೂಕಿನಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಕಟಾವಿನ ಅಂಚಿನಲ್ಲಿದ್ದ ಭತ್ತದ ಬೆಳೆಗೆ ಹಾನಿಯಾಗಿದ್ದು ಮತ್ತು ಭತ್ತದ ಕಾಳು ಉದುರಿರುವುದು.
ಸಿರವಾರ: ತಾಲೂಕಿನಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಕಟಾವಿನ ಅಂಚಿನಲ್ಲಿದ್ದ ಭತ್ತದ ಬೆಳೆಗೆ ಹಾನಿಯಾಗಿದ್ದು ಮತ್ತು ಭತ್ತದ ಕಾಳು ಉದುರಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಅಕಾಲಿಕ ಆಲಿಕಲ್ಲು ಮಳೆ
  • ಸಿರವಾರ ಮಳೆ ನೆಲಕ್ಕುದುರಿದ ಭತ್ತ
ಸಿರವಾರ: ತಾಲೂಕಿನಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಕಟಾವಿನ ಅಂಚಿನಲ್ಲಿದ್ದ ಭತ್ತದ ಬೆಳೆಗೆ ಹಾನಿಯಾಗಿದ್ದು, ಬೆಳೆಗಾರರು ಆತಂಕ್ಕಕೀಡಾಗಿದ್ದಾರೆ.
ತಾಲೂಕಿನಲ್ಲೆಡೆ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆಯಾಗಿ ಭೂಮಿಯನ್ನು ತಂಪಾಗಿಸಿತು. ಎರಡು ದಿನ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಂಗಳವಾರ ಸಂಜೆ ಆಲಿಕಲ್ಲು ಸಹಿತ ಮಳೆಯಾದ್ದರಿಂದ ಪಟ್ಟಣ, ಅತ್ತನೂರು, ನವಲಕಲ್, ಮಾಡಗಿರಿ, ಚಾಗಬಾವಿ ಸೇರಿ ವಿವಿಧ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ಮರಟ, ಜಾಡಲದಿನ್ನಿ ಸೇರಿದಂತೆ ವಿವಿಧೆಡೆ ಕಾಳುಕಟ್ಟಿ, ಕಟಾವಿನ ಅಂಚಿನಲ್ಲಿದ್ದ ಪೈರು ನೆಲಕ್ಕುದುರಿದೆ.
ತಾಲೂಕಿನ ಕೆಲ ಭಾಗಗಳಲ್ಲಿ 9-ಎ ಕಾಲುವೆಯ ನೀರು ಹಾಗೂ ಬೋರ್‌ವೆಲ್ ಆಶ್ರಿತದಲ್ಲಿ ರೈತರು ಅಲ್ಲಲ್ಲಿ ಭತ್ತ ಬೆಳೆದಿದ್ದರು. ಆಲಿಕಲ್ಲು ಮಳೆ ರಭಸಕ್ಕೆ ಶೇ.70-80 ನೆಲಕ್ಕೆ ಬಿದ್ದಿರುವುದರಿಂದ ರೈತ ಕಂಗಾಲಾಗಿದ್ದಾನೆ. ಸಾವಿರಾರು ರೂ. ವ್ಯಯ ಮಾಡಿ ಬೆಳೆದ ಬೆಳೆ ಇನ್ನೇನು ಕೈ ಸೇರಬೇಕು ಎನ್ನುವಷ್ಟರಲ್ಲಿ ಅಕಾಲಿಕ ಮಳೆಗೆ ತುತ್ತಾಗಿ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ಬೆಳೆಯಲಾಗಿದೆ. ಈ ಆಲಿಕಲ್ಲು ಮಳೆಗೆ ಭತ್ತ ಸಂಪೂರ್ಣ ಉದುರಿ ಹೋಗಿದೆ. ಸರ್ಕಾರ ರೈತರಿಗೆ ಪರಿಹಾರ ನೀಡಿ ಆಸರೆಯಾಗಬೇಕಿದೆ ಎಂದು ಪಟ್ಟಣದ ರೈತ ಆದೆಪ್ಪ ಚಿನ್ನಾನ್ ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net