ಸಕಾಲಕ್ಕೆ ಗಣತಿ ಮುಗಿಸಿದವರಿಗೆ ಬಹುಮಾನ

ಮಾನ್ವಿಯ ಪುರಸಭೆ ಸಭಾಂಗಣದಲ್ಲಿ ಶನಿವಾರ ಮೊದಲ ಹಂತದ ಮನೆಪಟ್ಟಿ ಸಮೀಕ್ಷೆ ಪೂರ್ಣಗೊಳಿಸಿದ ಗಣತಿದಾರರನ್ನು ಸನ್ಮಾನಿಸಲಾಯಿತು. ಮುಖ್ಯಾಧಿಕಾರಿ ಪರಶುರಾಮ ದೇವಮಾನೆ, ಡಾ. ಸೈಯದ್ ಮಹ್ಮದ್ ಮುಜೀಬ್, ವಲೀಬಾಬು, ಶೋಭಾ ಇದ್ದರು.
ಮಾನ್ವಿಯ ಪುರಸಭೆ ಸಭಾಂಗಣದಲ್ಲಿ ಶನಿವಾರ ಮೊದಲ ಹಂತದ ಮನೆಪಟ್ಟಿ ಸಮೀಕ್ಷೆ ಪೂರ್ಣಗೊಳಿಸಿದ ಗಣತಿದಾರರನ್ನು ಸನ್ಮಾನಿಸಲಾಯಿತು. ಮುಖ್ಯಾಧಿಕಾರಿ ಪರಶುರಾಮ ದೇವಮಾನೆ, ಡಾ. ಸೈಯದ್ ಮಹ್ಮದ್ ಮುಜೀಬ್, ವಲೀಬಾಬು, ಶೋಭಾ ಇದ್ದರು.
Published on
ಮಾನ್ವಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜನಗಣತಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ನಿಗದಿತ ಅವಧಿಯಲ್ಲಿ ಮೊದಲ ಹಂತ ಪೂರ್ಣಗೊಳಿಸಿದ ಗಣತಿದಾರರಿಗೆ ಪುರಸಭೆಯಿಂದ ಬಹುಮಾನ ನೀಡಲಾಗಿದೆ ಎಂದು ಪಟ್ಟಣದ ಜನಗಣತಿ ಅಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ದೇವಮಾನೆ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶನಿವಾರ ಮೊದಲ ಹಂತದ ಮನೆಪಟ್ಟಿ ಸಮೀಕ್ಷೆ ಪೂರ್ಣಗೊಳಿಸಿದ ಗಣತಿದಾರರನ್ನು ಸನ್ಮಾನಿಸಿ ಮಾತನಾಡಿದರು. ಮೊದಲ ಹಂತದ ಮನೆಪಟ್ಟಿ ಸಮೀಕ್ಷೆಯನ್ನು ಗಣತಿದಾರರಾದ ಪ್ರಮೋದಕುಮಾರ, ಸೋಮಶೇಖರ್, ಆಂಜನೇಯ, ಶೋಭಾ, ರೆಹಮತ್‌ಖಾನ್ ಪೂರ್ಣಗೊಳಿಸಿದ್ದಾರೆ ಎಂದರು.
ನಂತರ ಜನಗಣತಿದಾರು ಹಾಗೂ ಮೇಲ್ವಿಚಾರಕರಿಗೆ ಕುಡಿವ ನೀರಿನ ಬಾಟಲ್‌ಗಳನ್ನು ವಿತರಿಸಲಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net