ಸೆಪ್ಟೆಂಬರ್ 17 ರಂದು ಪ್ರತಿರೋಧ ಹೋರಾಟ

 ಎಸ್.ಮಾರೆಪ್ಪ
ಎಸ್.ಮಾರೆಪ್ಪ
Published on

ರಾಜ್ಯ ಸಚಿವ ಸಂಪುಟದಲ್ಲಿ ಜಿಲ್ಲೆಗೆ ಅದ ಅನ್ಯಾಯ ವಿರೋಧಿಸಿ ಪ್ರತಿಭಟನೆ ಮಾಡಿದ ಹೋರಾಟಗಾರರ ಬಂಧನ ಖಂಡನೀಯವಾಗಿದ್ದು, ಅನ್ಯ ಜಿಲ್ಲೆಯವರ ಉಸ್ತುವಾರಿ ವಿರೋಧಿಸಿ ಸೆಪ್ಟೆಂಬರ್ 17 ರಂದು ವಿಮೋಚನಾ ದಿನದಂದೂ ಪ್ರತಿರೋಧ ಹೋರಾಟ ನಡೆಸಲಾಗುತ್ತದೆಂದು ದಲಿತ ಹೋರಾಟ ಸಮಿತಿ ಸಂಚಾಲಕ ಎಸ್.ಮಾರೆಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೋರಾಟಗಾರ ಬಂಧನವಾದಗ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಜಿಲ್ಲೆಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತುತ್ತಿಲ್ಲ. ಕಲಬುರಗಿ ದೊರೆಗೆ ಜಿಲ್ಲೆ ಗುಲಾಮಗಿರಿ ರಾಜಕೀಯ ಧ್ವನಿ ಕೇಳಿಸದಂತೆ ತಡೆಯಲಾಗುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಕೈ ಚಾಚುವ ಮನಸ್ಥಿತಿಯಿಂದ ಹೊರಬರುತ್ತಿಲ್ಲ. ಸಚಿವ ದೊರಕುವವರಗೆ ಹೋರಾಟ ನಿಲ್ಲುವದಿಲ್ಲ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್ ಮಾತನಾಡಿ, ಜಿಲ್ಲೆಗೆ ಸಚಿವ ಸ್ಥಾನಕ್ಕೆ ವಂಚಿಸಿರುವ ಎಲ್ಲಾ ಪಕ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಜಿಲ್ಲೆ ಚುನಾಯಿತ ಜನಪ್ರತಿನಿಧಿಗಳು ಪ್ರಶ್ನಿಸದೇ ಇರುವದೇ ಕಾರಣವಾಗಿದೆ. ಜಿಲ್ಲೆಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಜಿಲ್ಲೆಗೆ ಆಗಮಿಸುವ ಸಚಿವರುಗಳಿಗೆ ಫೇರಾವ್ ಮಾಡಲಾಗುತ್ತದೆ ಎಂದರು.
ಈ ಸಂದರ್ಬದಲ್ಲಿ ಪ್ರಮುಖರಾದ ರವೀಂದ್ರನಾಥ ಪಟ್ಟಿ, ಎಂ.ಆರ್.ಭೇರಿ, ಬಸವರಾಜ ಭಂಡಾರಿ, ಜೈಭೀಮ, ಶ್ರೀನಿವಾಸ , ಹೇಮರಾಜ ಅಸ್ಕಿಹಾಳ, ಶ್ರೀನಿವಾಸ ಕೊಪ್ಪರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net