ಸಂಶೋಧಕರು ಪೂರ್ವಗ್ರಹಗಳಿಗೆ ಒಳಗಾಗದಿರಲಿ

ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂಶೋಧನಾ ಕಾರ್ಯಾಗಾರವನ್ನು ಲಿಂಗಸುಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಧ್ಯಾಪಕ ಡಾ.ಸಂಗನಗೌಡ ಉದ್ಘಾಟಿಸಿದರು. ಪ್ರಾಚಾರ್ಯ ಪಾಂಡು, ಪ್ರಾಧ್ಯಾಪಕರಾದ ಡಾ.ಲಕ್ಷ್ಮೀದೇವಿ, ದಿವ್ಯಾ, ಅಂಬುತಾಯಿ ಇದ್ದರು.
ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂಶೋಧನಾ ಕಾರ್ಯಾಗಾರವನ್ನು ಲಿಂಗಸುಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಧ್ಯಾಪಕ ಡಾ.ಸಂಗನಗೌಡ ಉದ್ಘಾಟಿಸಿದರು. ಪ್ರಾಚಾರ್ಯ ಪಾಂಡು, ಪ್ರಾಧ್ಯಾಪಕರಾದ ಡಾ.ಲಕ್ಷ್ಮೀದೇವಿ, ದಿವ್ಯಾ, ಅಂಬುತಾಯಿ ಇದ್ದರು.
Published on
ಸಿಂಧನೂರು: ವಿದ್ಯಾರ್ಥಿಗಳು ಚಿಕಿತ್ಸಕ ದೃಷ್ಟಿಕೋನ ರೂಢಿಸಿಕೊಳ್ಳಬೇಕು. ಯಾವುದನ್ನು ನೇರವಾಗಿ ಒಪ್ಪಿಕೊಳ್ಳದೆ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಲಿಂಗಸುಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಧ್ಯಾಪಕ ಡಾ.ಸಂಗನಗೌಡ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸಮಾಜ ವಿಜ್ಞಾನ ಅಧ್ಯಯನ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಏರ್ಪಡಿಸಿದ್ದ ಸಂಶೋಧನಾ ಕಾರ್ಯಾಗಾರದಲ್ಲಿ ಸಮಾಜ ವಿಜ್ಞಾನ ಸಂಶೋಧನೆಯ ವಿಧಿವಿಧಾನಗಳ ಕುರಿತು ಉಪನ್ಯಾಸ ನೀಡಿದರು. ಸಮಾಜ ಎದುರಿಸುತ್ತಿರುವಂಥ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಜವಾಬ್ದಾರಿ ಸಮಾಜ ವಿಜ್ಞಾನ ವಿದ್ಯಾರ್ಥಿಗಳ ಮೇಲಿದೆ. ಸಾಮಾಜಿಕ ವಿದ್ಯಾಮಾನಗಳನ್ನು ತಾಳ್ಮೆಯಿಂದ ಅವಲೋಕಿಸಬೇಕು. ನಿಷ್ಪಕ್ಷಪಾತವಾಗಿ ವಿಶ್ಲೇಷಿಸಬೇಕು. ಸಂಶೋಧಕ ಪೂರ್ವಗ್ರಹಗಳಿಗೆ ಒಳಗಾಗಬಾರದು. ಸಾಮಾಜಿಕ ಜವಾಬ್ದಾರಿ ಮರೆಯಬಾರದು ಎಂದು ತಿಳಿಸಿದರು. 
ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಜಾಜಿ ದೇವೇಂದ್ರಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂಶೋಧನಾ ಕ್ಷೇತ್ರವು ತುಂಬ ಬಡವಾಗಿದೆ. ಯುವ ಸಂಶೋಧಕರು ಸಂಶೋಧನೆಯಲ್ಲಿ ನೈತಿಕತೆಯನ್ನು ಮೆರೆದಾಗ ಮಾತ್ರ ಉತ್ತಮ ಸಂಶೋಧನೆಗಳು ಹೊರಬರಲು ಸಾಧ್ಯ ಎಂದರು. 
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಲಕ್ಷ್ಮೀದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಪಾಂಡು ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ್ಥೆ ದಿವ್ಯಾ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಂಬುತಾಯಿ,ಸಮಾಜಶಾಸ್ತ್ರ ಮುಖ್ಯಸ್ಥ  ತಹನಿಯತ್ ಜಹಾ, ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹನಮಗೌಡ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net