ಸರ್ಕಾರಿ ಶಾಲೆಯಲ್ಲಿ ಆರ್‌ಟಿಇ ಸಮರ್ಪಕ ಜಾರಿಗೊಳಿಸಲು ಒತ್ತಾಯಿಸಿ ಸರ್ಕಾರಿ ಶಾಲೆ ಅಭಿವೃದ್ಧಿ ವೇದಿಕೆ ವತಿಯಿಂದ ರಾಯಚೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಎಡಿಸಿ ಶಿವಾನಂದ ಭಜಂತ್ರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾ ಸಂಚಾಲಕಿ ವಿದ್ಯಾ ಪಾಟೀಲ್, ರಾಘವೇಂದ್ರ ಕುಷ್ಟಗಿ, ರೂಪಮ್ಮ, ಶಿವರಾಂ ರೆಡ್ಡಿ ,ಗುರುರಾಜ್,ಸೈಯದ್ ಹಫೀಜ್ ಉಲ್ಲಾ, ಬಸವರಾಜ್ ಸ್ವಾಮಿ, ಎಂ.ಆರ್.ಬೇರಿ, ಮಾರಮ್ಮ ಇದ್ದರು.
ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾ ಸಂಚಾಲಕಿ ವಿದ್ಯಾ ಪಾಟೀಲ್ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಕರ ತೀವ್ರ ಕೊರತೆ ಯಿಂದ ಗುಣಮಟ್ಟ ಶಿಕ್ಷಣ ಸಿಗಲು ಸಾಧ್ಯವಾಗುತ್ತಿಲ್ಲ ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆಗಳಿದ್ದು ಹಲವಾರು ಸಲ ಮನವಿ ಮಾಡಿದರು ಸರ್ಕಾರ ಗಮನ ಹರಿಸಿದ ಇರುವುದು ಶೋಚನಿಯ ಸಂಗತಿಯಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ದಲಿತ, ಅಲ್ಪಸಂಖ್ಯಾತರ, ಬಡವರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು ಅವರಿಗೆ ಶಿಕ್ಷಕರನ್ನು ಕೊಡದೆ ಅವರ ಗುಣಮಟ್ಟ ಶಿಕ್ಷಣ ಕುಸಿಯಲು ಸರಕಾರ ನೇರವಾಗಿ ಹೊಣೆಯಾಗಿದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣ ಜಾರಿಯಾಗಿ 17 ವರ್ಷ ಕಳೆದರೂ ಇಂದಿಗೂ ನಮ್ಮ ಭಾಗದಲ್ಲಿ ಶುದ್ಧ ಕುಡಿಯುವ ನೀರು, ಆಟದ ಮೈದಾನ, ತರಗತಿಗೊಬ್ಬರಂತೆ ಶಿಕ್ಷಕರು ಇರದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟ ಸಿಗುತ್ತಿಲ್ಲ, ಸರಕಾರ ತಕ್ಷಣ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಅರ್‌ಟಿಇಯನ್ನು ಸಮರ್ಪಕ ಜಾರಿಗೊಳಿಸಲು ಮುಂದಾಗಬೇಕು. ಖಾಲಿಯಿರುವ ಹುದ್ದೆಗಳನ್ನು ತಕ್ಷಣ ತುಂಬಬೇಕು. ರಾಜ್ಯ ಮಟ್ಟದಲ್ಲಿ ಶಿಕ್ಷಣ ತಜ್ಞರ ಒಳಗೊಂಡು ಆರ್.ಟಿ.ಇ ಅನುಷ್ಠಾನ ಕುರಿತು ಇಲ್ಲಿಯವರೆಗೆ ಜಾರಿ ಮಾಡಿದ ಕೆಲಸಗಳ ಕುರಿತು ಶ್ವೇತಪತ್ರ ಹೊರಡಿಸುವ ಮೂಲಕ ಆರ್‌ಟಿಇ ಅನುಷ್ಠಾನಕ್ಕೆ ತಜ್ಞರ ಸಮಿತಿಯ ಒಳಗೊಂಡು ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ರಾಘವೇಂದ್ರ ಕುಷ್ಟಗಿ ಮಾತನಾಡಿ, ಸರ್ಕಾರ ಕನ್ನಡವನ್ನು ಉಳಿಸಬೇಕಾಗಿ ದ್ದರೆ ಕನ್ನಡ ಶಾಲೆಗಳನ್ನು ಉಳಿಸಬೇಕಾಗಿದೆ, ಸುಮಾರು ವರ್ಷಗಳಿಂದ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಗುಣಮಟ್ಟ ಶಿಕ್ಷಣ ಕೊಡದೆ ಈ ಭಾಗದ ವಿದ್ಯಾರ್ಥಿಗಳನ್ನು ವಂಚಿಸುತ್ತಿದೆ. ಸರಕಾರಕ್ಕೆ ಕಿಂಚಿತ್ತಾದರೂ ಬಡವರ ಬಗ್ಗೆ ಕನ್ನಡದ ಬಗ್ಗೆ ಗ್ರಾಮೀಣ ಪ್ರದೇಶದ ಜನರ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಶಿಕ್ಷಕರನ್ನು ತುಂಬುವ ಮೂಲಕ ಗುಣ ಮಟ್ಟದ ಶಿಕ್ಷಣಕ್ಕೆ ಒತ್ತು ಕೊಡಬೇಕು ಎಂದರು.
ಈ ಸಂರ್ಭದಲ್ಲಿ ರೂಪಮ್ಮ, ಶಿವರಾಂ ರೆಡ್ಡಿ ,ಗುರುರಾಜ್,ಸೈಯದ್ ಹಫೀಜ್ ಉಲ್ಲಾ, ಬಸವರಾಜ್ ಸ್ವಾಮಿ, ಎಂ.ಆರ್.ಬೇರಿ, ಮಾರಮ್ಮ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.