ರಿರ್ಪೋಟರ್ಸ್‌ ಗಿಲ್ಡ್ ಬೆಳ್ಳಿ ಹಬ್ಬದ ನಿಮಿತ್ತ ವಿಜೇತರ ಆಯ್ಕೆ

ವಿಜಯ ಕುಮಾರ ಜಾಗಟಗಲ್
ವಿಜಯ ಕುಮಾರ ಜಾಗಟಗಲ್
Published on

ಪ್ರಮುಖ ಮುಖ್ಯಾಂಶಗಳು

  • ಚಿತ್ರದುರ್ಗದ ಡೆಡ್‌ಲೈನ್ ಕಥೆಗೆ ಮೊದಲ ಸ್ಥಾನ
  • ಮೈಸೂರಿನ ಶ್ರೀನಿವಾಸ ಎಂ ಅವರ ಮುಸ್ಸಂಜೆಯ ಕಥೆಗಳು
ರಾಯಚೂರು
ರಾಯಚೂರುರಿರ್ಪೋಟರ್ಸ್‌ ಗಿಲ್ಡ್ ಬೆಳ್ಳಿ ಹಬ್ಬದ ನಿಮಿತ್ತ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಥೆ ಮತ್ತು ಕವನ ಸ್ಪರ್ಧೆಯಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗಿದೆಂದು ಗಿಲ್ಡ್ ಅಧ್ಯಕ್ಷ ವಿಜಯಕುಮಾರ ಜಾಗಟಗಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಥಾ ಸ್ಫರ್ಧೆಐಲ್ಲಿ ಚಿತ್ರದುರ್ಗದ ಪತ್ರಕರ್ತ ಕೆ.ಪಿ.ಓಕಾಂರಮೂರ್ತಿ ಯವರ ಡೆಡ್‌ಲೈನ್ ಕಥೆಗೆ ಮೊದಲ ಸ್ಥಾನ, ಮೈಸೂರು ವಿಶೇಷ ವರದಿಗಾರ ಶ್ರೀನಿವಾಸ.ಎಂ.ಇವರ ನಿಧನ ವಾರ್ತೆ ಕಥೆಗೆ ದ್ವಿತೀಯ ಸ್ಥಾನ, ರಾಯಚೂರಿನ ಸಿದ್ದಯ್ಯಸ್ವಾಮಿ ಕುಕನೂರು ಇವರ ಪೆಸಿಡೆಂಟ್ ಶಂಕ್ರ ಕಥೆಗೆ ತೃತೀಯ ಸ್ಥಾನ ದೊರೆತಿದೆ. ತೀರ್ಫುಗಾರರ ಮೆಚ್ಚುಗೆ ಪಡೆದ ಕಥೆಗಳಲ್ಲಿ ಮುದುಗಲ್‌ನ ಡಾ.ಶರಣಪ್ಪ ಹೊಸೂರು ಅವರ ನಮ್ಮ ಹುಡ್ರು, ರಾಯಚೂರಿನ ಬಸವರಾಜ ಭೋಗಾವತಿ ಅವರ ಕಪ್ಪು ಬಣ್ಣದ ಬೂಟು, ಮಣಿಪಾಲದ ಹಿರಿಯ ಉಪ ಸಂಪಾದಕ ಅನಿಲಕುಮಾರ ಹಪ್ಪ್ಪಳ ಸ್ವಾಮಿ ಕಥೆ ಮೆಚ್ಚುಗೆ ಪಾತ್ರವಾಗಿದೆ.

ರಾಜ್ಯ ಮಟ್ಟದ ಕವನ ಸ್ಪರ್ಧೆಗೆ ಮೈಸೂರಿನ ವಿಶೇಷ ವರದಿಗಾರ ಶ್ರೀನಿವಾಸ ಎಂ ಅವರ ಮುಸ್ಸಂಜೆಯ ಕಥೆಗಳು ಕವನ ಪ್ರಥಮ ಸ್ಥಾನ, ಅಂಕಣಕಾರ ಶಂಕರ ಪಾಗೋಜಿಯವರ ಧರ್ಮ ಧಳ್ಳುರಿ ಮತ್ತು ರಾಯಚೂರಿನ ಚಂದಪ್ಪ ದೋರನಹಳ್ಳಿಯವರ ಹೆತ್ತವ್ವನ ಸೆರಗಿನ ಚಪ್ಪರ ಕವನಗಳಿಗೆ ದ್ವಿತೀಯ ಸ್ಥಾನ, ಯಲಬುರ್ಗಾದ ಉಮಾಶಂಕರ ಹೀರೆಮಠ ಇವರ ಅಂಧಭಕ್ತರು ಕವನಕ್ಕೆ ತೃತಿಯ ಸ್ಥಾನ ದೊರೆತಿದೆ.
ಯಾದಗಿರಿಯ ಭೀಮಸೇನರಾವ್.ಕೆ.ಕುಲ್ಕರ್ಣಿ ವಜ್ಜಲ್ ಇವರ ನಾಡದೇವಿ ನಿನ್ನ ನೆನೆದು ಕವನ, ಮಣಿಪಾಲ ಹಿರಿಯ ಉಪಸಂಪಾದಕ ಅನಿಲಕುಮಾರ ಕೈರಂಗಳ ಇವರ ಭಾವುಕರಾಗುವ ಮುನ್ನ , ದಾವಣಗೆರೆಯ
ವರದಿಗಾರ ಬಸವರಾಜ. ಕೆ.ಜಿ ಇವರ ಸಾವೇ ಇಲ್ಲದ ಪ್ರೀತಿಗಾಗಿ ಕವನ ತೀರ್ಪುಗಾರರ ಮೆಚ್ಚುಗೆ ಪಾತ್ರವಾಗಿವೆ.

ಕಥಾ ಸ್ಪರ್ದೆಯ ಮೊದಲ ಸ್ಥಾನ ಪಡೆದವರಿಗೆ 10 ಸಾವಿರ ರೂ ನಗದು ಹಣ, ದ್ವಿತೀಯ ಸ್ಥಾನಕ್ಕೆ 7 ಸಾವಿರ ರೂ, ತೃತೀಯ ಸ್ಥಾನಕ್ಕೆ 3 ಸಾವಿರ ರೂ, ಜತೆಗೆ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರಿಗೆ 5 ಸಾವಿರ ರೂ, ದ್ವಿತೀಯ ಸ್ಥಾನಕ್ಕೆ 3 ಸಾವಿರ ರೂ, ತೃತೀಯ ಸ್ಥಾನಕ್ಕೆ 2 ಸಾವಿರ ರೂ. ನಗದು ಹಣ ನೀಡಲಾಗುತ್ತದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ, ಕವನಗಳಿಗೆ ತಲಾ ಒಂದು ಸಾವಿರ ರೂನಗದು ನೀಡಲಾಗುತ್ತದೆ. ಕಥೆ ಸ್ಪರ್ಧಾ ತೀರ್ಪುಗಾರರಾಗಿ ಖ್ಯಾತ ಕಥೆಗಾರ ಮಹಾಂತೇಶ ನವಲಕಲ್, ಕವನ ಸ್ಪರ್ಧೆಯ ತೀರ್ಪುಗಾರರಾಗಿ ಪತ್ರಕರ್ತ ಕವಿ ಚಂದ್ರ ತುರವಿಹಾಳ ಇವರು ಕಾರ್ಯನಿರ್ವಹಿಸಿದ್ದು ಅಭಿನಂದಿಸುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಗಿಲ್ಡ್ ಕಾರ್ಯದರ್ಶಿ ವೆಂಕಟೇಶ ಹೂಗಾರ, ಆನಂದ. ವಿ.ಕೆ, ಶ್ರೀಕಾಂತ ಸಾವೂರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net