ರಿಪೋರ್ಟರ್ಸ್ ಗಿಲ್ಡ್ ಕ್ಯಾಲೆಂಡರ್ ಬಿಡುಗಡೆ

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆಯಿತು. ಗಿಲ್ಡ್ನ ಸಂಸ್ಥಾಪಕ ಸದಸ್ಯರಾದ ಸುರೇಂದ್ರಾಚಾರ್‌ಕೋರ್ತಕುಂದಾ, ರಘುನಾಥರೆಡ್ಡಿ ಮನ್ಸಲಾಪೂರು, ಉಪಾಧ್ಯಕ್ಷ ಎಂ.ಜಯರಾಮ್, ಕಾರ್ಯದರ್ಶಿ ವೆಂಕಟೇಶ ಹೂಗಾರ, ಪ್ರಾದೇಶಿಕ ಜಿಲ್ಲಾ ಕನ್ನಡ ಪತ್ರಿಕೆ ಸಂಪಾದಕರ ಸಂಘದ ಅಧ್ಯಕ್ಷ ಚನ್ನಬಸವ ಬಾಗಲವಾಡ, ಗಿಲ್ಡ್ ಖಜಾಂಚಿ ಕೆ.ಸಣ್ಣ ಈರಣ್ಣ ಇದ್ದರು.

Published on
ರಾಯಚೂರು ರಾಯಚೂರು ರಿಪೋರ್ಟರ್ಸ್ ಗಿಲ್ಡ್ ನ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಗಿಲ್ಡ್ನ ಸಂಸ್ಥಾಪಕ ಸದಸ್ಯರುಗಳಾದ ಸುರೇಂದ್ರಾಚಾರ್‌ಕೋರ್ತಕುಂದಾ ಹಾಗೂ ರಘುನಾಥರೆಡ್ಡಿ ಮನ್ಸಲಾಪೂರು 2026 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಸುರೇಂದ್ರಾಚಾರ್ ಕೋರ್ತಕುಂದಾ ರಿಪೋರ್ಟರ್ಸ್ ಗಿಲ್ಡ್ ಕಾಲಕ್ಕೆ ತಕ್ಕಂತೆ ಹೊಸತನದೊಂದಿಗೆ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಎಲ್ಲ ಪತ್ರಕರ್ತರು ಸಂಘಟಿತರಾಗಿ ಸಮಾಜದ ಸಮಸ್ಯೆಗಳನ್ನು ಸರ್ಕಾರ, ಅಧಿಕಾರಿಗಳ ಗಮನಕ್ಕೆ ಬರುವಂತೆ ವರದಿ ಮಾಡಲು ಸಲಹೆ ಮಾಡಿದರು. ಪಥ ಬದಲಾವಣೆಯ ಸಂಕ್ರಮಣದಂದು ಕ್ಯಾಲೆಂಡರ್ ಬಿಡುಗಡೆ ಶುಭ ಸೂಚನೆ. ಬದಲಾವಣೆಗಳನ್ನು ಸರ್ವರ ಬಾಳಲ್ಲೂ ಆಗಲಿ ಎಂದರು.
ಹಿರಿಯ ಪತ್ರಕರ್ತ ರಘುನಾಥ್ ರೆಡ್ಡಿ ಮನ್ಸಲಾಪೂರ ಮಾತನಾಡಿ, ರಿಪೋರ್ಟರ್ಸ್ ಗಿಲ್ಡ್ನ ಹೊಸತನದೊಂದಿಗೆ ಕೆಲಸ ಮಾಡುತ್ತಿದ್ದು ಅದಕ್ಕೆ ಎಲ್ಲ ಹಿರಿಯರು, ಕಿರಿಯರು ಬೆನ್ನೆಲುಬಾಗಿ ನಿಂತು ಬೆಂಬಲಿಸುವ ಕೆಲಸ ಮಾಡಲು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಜಯರಾಮ್, ಕಾರ್ಯದರ್ಶಿ ವೆಂಕಟೇಶ ಹೂಗಾರ, ಪ್ರಾದೇಶಿಕ ಜಿಲ್ಲಾ ಕನ್ನಡ ಪತ್ರಿಕೆ ಸಂಪಾದಕರ ಸಂಘದ ಅಧ್ಯಕ್ಷ ಚನ್ನಬಸವ ಬಾಗಲವಾಡ, ಗಿಲ್ಡ್ ಖಜಾಂಚಿ ಕೆ.ಸಣ್ಣ ಈರಣ್ಣ ,ಶ್ರೀನಿವಾಸ್ ಇನಾಂದಾರ ಸೇರಿ ಅನೇಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net