ಪಿಡಿಒ ಲಕ್ಷ್ಮಿ ಅಷ್ಟಗಿ ಮಾತನಾಡಿ, ಜಾಲಹಳ್ಳಿಯಲ್ಲಿ ಐದು ಸಾವಿರ ಜನಸಂಖ್ಯೆ, ಒಂದೂವರೆ ಸಾವಿರಕ್ಕೂ ಅಧಿಕ ಮನೆಗಳು, 300ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿವೆ. ನಿತ್ಯ ಸಂಗ್ರಹಿಸುವ ಕಸ ವಿಲೇವಾರಿಗೆ ಜಾಗದ ಕೊರತೆಯಿದೆ. ಹೀಗಾಗಿ ಮೂರ್ನಾಲ್ಕು ಕಡೆ ಜಾಗ ಪರಿಶೀಲನೆ ಮಾಡಿದ್ದು, ಒಂದು ಜಾಗ ಅಂತಿಮಗೊಳಿಸಿ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.