ಜಿಲ್ಲಾ ಉಪಾಧ್ಯಕ್ಷ ಶರಣೋಜಿ ಪವಾರ್ ಮಾತನಾಡಿ, ಗುರುಗುಂಟಾದಿಂದ ಹಟ್ಟಿ ಪಟ್ಟಣಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಚಿನ್ನದ ಗಣಿ ಕಾರ್ಮಿಕರು, ಅಧಿಕಾರಿಗಳಿಗೆ ಹಾಗೂ ಗುರುಗುಂಟಾ ನಾಡಕಚೇರಿ, ರೈತ ಸಂಪರ್ಕ ಕೇಂದ್ರಕ್ಕೆ ಬರಲು ಕೋಠಾ, ಹಟ್ಟಿ ಪಟ್ಟಣ, ಅನ್ವರಿ, ವೀರಾಪುರ, ನೀಲೋಗಲ್, ಹೊಸೂರು, ನಗನೂರು, ವಂದಲಿ ಹೊಸೂರು ಗ್ರಾಮದ ಜನರು, ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ರಸ್ತೆಗಳ ಮೇಲೆದ್ದಿರುವ ಜಲ್ಲಿಕಲ್ಲುಗಳು ಜೀವಕ್ಕೆ ಸಂಚಕಾರ ತಂದೊಡ್ಡಿವೆ. ರಸ್ತೆ ಬದಿ ಗಿಡಗಂಟಿಗಳು ವಾಹನ ಸವಾರರ ಮೈ-ಕೈ, ಕಣ್ಣುಗಳಿಗೆ ರಾಚುತ್ತಿವೆ. ಆದ್ದರಿಂದ ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆ ದುರಸ್ತಿಗೊಳಿಸಿ ಗ್ರಾಮೀಣ ಭಾಗದ ಜನರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.