ಮುದಗಲ್: ಸಮೀಪದ ಹಡಗಲಿ ಗ್ರಾಮದಲ್ಲಿ ಶುದ್ಧ ಕುಡಿವ ನೀರಿನ ಘಟಕ ಕೆಟ್ಟಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಪಂ, ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಶುದ್ಧ ಕುಡಿವ ನೀರಿನ ಘಟಕ ಹಲವು ತಿಂಗಳಿಂದ ಕೆಟ್ಟಿದ್ದು, ದುರಸ್ತಿಗೊಳಿಸದೇ ಅಧಿಕಾರಿಗಳು ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ.
ಶುದ್ಧ ನೀರಿಗಾಗಿ ದೂರದ ಯರದೊಡ್ಡಿ, ರಾಮಪ್ಪನ ತಾಂಡಾ, ಕನ್ನಾಳ ಗ್ರಾಮಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಶುದ್ಧ ನೀರಿನ ಘಟಕ ದುರಸ್ತಿಗೊಳಿಸುವಂತೆ ಗ್ರಾಮದ ಅಮರೇಶ ವಿಟ್ಲಾಪುರ, ಮಹಾಂತೇಶ ತುಗ್ಗಲಿ, ವೆಂಕಟೇಶ, ತಿಪ್ಪಣ್ಣ, ಛತ್ರಪ್ಪ ಒತ್ತಾಯಿಸಿದ್ದಾರೆ.
ಈ ಕುರಿತು ತಲೇಖಾನ್ ಗ್ರಾಪಂ ಮಾಜಿ ಸದಸ್ಯ ಮಾನಸಿಂಗ್ ರಾಠೋಡ್ ಪ್ರತಿಕ್ರಿಯಿಸಿ, ಹಡಗಲಿ ಆರ್‌ಒ ಪ್ಲಾಂಟ್ ದುರಸ್ತಿಗೆ 15ನೇ ಹಣಕಾಸು ಯೋಜನೆಯಡಿ ಒಂದು ಲಕ್ಷ ರೂ.ಮೀಸಲಿರಿಸಲಾಗಿದೆ. ಕೂಡಲೇ ಅನುದಾನ ಬಳಸಿ ಘಟಕದ ದುರಸ್ತಿಗೆ ಗ್ರಾಪಂ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.