ಪಾಲಿಕೆಯಿಂದ ಅನಧಿಕೃತ ಮಳಿಗೆಗಳ ತೆರವು

ರಾಯಚೂರಿನ  ನವೋದಯ ರಸ್ತೆಯ ಎದುರಿಗೆ ಅನಧಿಕೃತವಾಗಿ ಹಾಕಲಾಗಿದ್ದ ಹೋಟೆಲ್‌ಗಳು, ಅಂಗಡಿಗಳು ಸೇರಿದಂತೆ 20ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳನ್ನು ಮಂಗಳವಾರ ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು.
ರಾಯಚೂರಿನ ನವೋದಯ ರಸ್ತೆಯ ಎದುರಿಗೆ ಅನಧಿಕೃತವಾಗಿ ಹಾಕಲಾಗಿದ್ದ ಹೋಟೆಲ್‌ಗಳು, ಅಂಗಡಿಗಳು ಸೇರಿದಂತೆ 20ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳನ್ನು ಮಂಗಳವಾರ ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು.
Published on
ರಾಯಚೂರು ನಗರದ ನವೋದಯ ರಸ್ತೆಯ ಎದುರಿಗೆ ಅನಧಿಕೃತವಾಗಿ ಹಾಕಲಾಗಿದ್ದ ಹೋಟೆಲ್‌ಗಳು, ಅಂಗಡಿಗಳು ಸೇರಿದಂತೆ 20ಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳನ್ನು ಎಸಿ ಡಾ.ಹಂಪಣ್ಣ ಸಜ್ಜನ್ ನೇತೃತ್ವದಲ್ಲಿ ಮಂಗಳವಾರ ಜೆಸಿಬಿಗಳ ಮೂಲಕ ತೆರವುಗೊಳಿಸಲಾಯಿತು.
ಕಳೆದ ಅನೇಕ ವರ್ಷಗಳಿಂದ ರಸ್ತೆಯ ಬದಿಯಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಹಾಕಿದ್ದು, ತೆರವಿಗಾಗಿ ಅನೇಕ ಸಾರಿ ಪಾಲಿಕೆ ತರವುಗೊಳಿಸಲು ನೋಟಿಸ್ ಸಹ ನೀಡಲಾಗಿತ್ತು. ಜತೆಗೆ ರಸ್ತೆ ಅಕ್ರಮಿತ ಅಂಗಡಿಗಳನ್ನು ತೆರವುಗೊಳಿಸುವ ಕುರಿತಂತೆ ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆ ನಡೆದಿತ್ತು. ಹೈಕೋರ್ಟ್ ಆದೇಶ ಹಾಗೂ ಜನಸಂಚಾರಕ್ಕೆ ಆಗುತ್ತಿರುವ ಅಡ್ಡಿ ಯ ಹಿನ್ನಲೆಯಲ್ಲಿ ಪಾಲಿಕೆ ಅಧಿಕಾರಿಗಳು ತೆರಳಿ ಅಂಗಡಿಗಳನ್ನು ತೆರವುಗೊಳಿಸಿದರು.ಅನೇಕ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರಾದರೂ ತೆರವುಗ ಕಾರ್ಯಚರಣೆಯನ್ನು ಮುಂದುವರೆಸಲಾಯಿತು.
ಕೆಲ ದಿನಗಳ ಹಿಂದೆಯಷ್ಟ ಜನದಟ್ಟಣೆಯಿಂದ ರಸ್ತೆಯಲ್ಲಿ ಅಪಘಾತಗಳು ಸಹ ಸಂಭವಿಸಿದ್ದವು. ಹೆದ್ದಾರಿ ರಸ್ತೆಗೆ ಹೊಂದಿಕೊಂಡಿರುವಂತೆ ಹಾಕಲಾಗಿರುವ ಅಂಗಡಿಗಳ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಖಾಯಂ ಸ್ವರೂಪ ಕಟ್ಟಡಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದರು . ಪೊಲೀಸ್ ಇಲಾಖೆ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ತೆರವು ಕಾರ್ಯಚರಣೆ ಮುಂದುವರೆಸಲಾಯಿತು. ಅನೇಕ ವ್ಯಾಪಾರಸ್ಥರು ಪಾಲಿಕೆ ಕ್ರಮಕ್ಕೆ ವಿರೋಧಿಸಿ ಕಾಲಾವಕಾಶ ನಿಡಬೇಕೆಂದು ವಾದಿಸಿದರು.
ಆದರೆ ಅಧಿಕಾರಿಗಳು ಅವಕಾಶ ನೀಡದೇ ನೇತಾಜಿ ನಗರ ಪೊಲೀಸರ ಬಂದೋಬಸ್ತ್‌ನಲ್ಲಿ ತೆರವು ಕಾರ್ಯಚರಣೆ ನಡೆಸಲಾಯಿತು. ಅನಧಿಕೃತವಾಗಿರುವ ಕಟ್ಟಡಗಳು ಹಾಗೂ ರಸ್ತೆ ಅತಿಕ್ರಮಿತ ಪ್ರದೇಶಗಳನ್ನು ತೆರವುಗೊಳಿಸುವ ಕಾರ್ಯಚರಣೆ ಮುಂದುವರೆಸಲಾಗುತ್ತದೆ ಎಂದು ಪಾಲಿಕೆ ಸಿಬ್ಬಂದಿಗಳು ಹೇಳಿದರು. ವ್ಯಾಪಾರಸ್ಥರು ಅಂಗಡಿಗಳ ತೆರವಿನಿಂದ ಹಿನ್ನಲೆಯಲ್ಲಿ ಕಂಗಾಲಾಗುವಂತಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net