ನಿವೇಶನದ ಜಾಗ ಬದಲಾಯಿಸಿ

ಲಿಂಗಸುಗೂರಿನಲ್ಲಿ ಶಾಸಕ ಮಾನಪ್ಪ ವಜ್ಜಲ್‌ಗೆ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಜಿಲಾನಿ ಪಾಷಾ, ಪ್ರಮುಖರಾದ ಅಜೀಜ್ ಪಾಷಾ, ಬಸವರಾಜಗೌಡ, ಚಂದ್ರಶೇಖರಗೌಡ, ಅಜ್ಮೀರ ಪಾಷಾ, ರಹೀಂ ಪಾಷಾ, ಮಾಲಾ, ಶಶಿಕಲಾ, ಅಮೀರ್ ಬೇಗಂ, ರಜಿಯಾ ಸುಲ್ತಾನ, ನೂರ್‌ಜಾ ಬೇಗಂ, ಹಲಿಮಾ, ರಾಜ್ಮಾ ಬೇಗಂ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರ ಒತ್ತಾಯ
  • ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್‌ಗೆ ಮನವಿ
ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಸ.ನಂ.286ರಲ್ಲಿ ವಾಜಪೇಯಿ ನಗರ ವಸತಿ ಯೋಜನೆಗೆ ಮಂಜೂರು ಮಾಡಿರುವ ಜಾಗದ ಬದಲಿಗೆ ಪುರಸಭೆ ವ್ಯಾಪ್ತಿಯಲ್ಲಿ ಯೋಗ್ಯ ಜಮೀನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಶಾಸಕ ಮಾನಪ್ಪ ವಜ್ಜಲ್‌ಗೆ ಮನವಿ ಸಲ್ಲಿಸಿದರು.
ವಾಜಪೇಯ ನಗರ ವಸತಿ ಯೋಜನೆಗೆ ಮಂಜೂರಾಗಿರುವ ಭೂಮಿ ಗುಡ್ಡಗಾಡು ಪ್ರದೇಶವಾಗಿದ್ದು, ಫಲಾನುಭವಿಗಳು ವಾಸ ಮಾಡಲು ಯೋಗ್ಯವಾಗಿಲ್ಲ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳಿಲ್ಲ. ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿ ದೋಷಪೂರಿತವಾಗಿದ್ದು, ಕಡು ಬಡವರನ್ನು ಆಯ್ಕೆಮಾಡಿ ಅರ್ಹರಿಗೆ ನಿವೇಶನ ಕಲ್ಪಿಸಬೇಕೆಂದು ಕೋರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net