ತಿರುಮಲದಿಂದ ರಾಯರಿಗೆ ಶೇಷವಸ ಸಮರ್ಪಣೆ

ಮಂತ್ರಾಲಯದಲ್ಲಿ  ಶ್ರೀರಾಘವೇಂದ್ರ ಗುರು ವೈಭವೋತ್ಸವದಲ್ಲಿ ಸೋಮವಾರ ತಿರುಪತಿಯಿಂದ ತರಲಾದ ವೆಂಕಟೇಶ್ವರ ದೇವರ ಶೇಷ ವಸ್ತ್ರವನ್ನು ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಶಿರದಲ್ಲಿ ಹೊತ್ತು ತಂದು ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಿದರು. ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಇದ್ದರು.
ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಗುರು ವೈಭವೋತ್ಸವದಲ್ಲಿ ಸೋಮವಾರ ತಿರುಪತಿಯಿಂದ ತರಲಾದ ವೆಂಕಟೇಶ್ವರ ದೇವರ ಶೇಷ ವಸ್ತ್ರವನ್ನು ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಶಿರದಲ್ಲಿ ಹೊತ್ತು ತಂದು ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಿದರು. ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಅನಿಸಿಕೆ
  • ತಿರುಮಲದಿಂದ ರಾಯರಿಗೆ ಶೇಷವಸ ಸಮರ್ಪಣೆ
  • ಭಕ್ತರ ನಗುವಿನಲ್ಲಿ ಭಗವಂತ ನೆಲೆಸಿದ್ದಾನೆ
ರಾಯಚೂರು ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀರಾಘವೇಂದ್ರ ಗುರು ವೈಭವೋತ್ಸವದ ನಿಮಿತ್ತ ಸೋಮವಾರ ತಿರುಪತಿ ತಿರುಮಲ ದೇವಸ್ಥಾನ ಸಮಿತಿ ವತಿಯಿಂದ ತರಲಾದ ಶ್ರೀವೆಂಕಟೇಶ ದೇವರ ಶೇಷವಸವನ್ನು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶಿರದಲ್ಲಿ ಹೊತ್ತು ತಂದು ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಿದರು.
ನಂತರ ಶ್ರೀಗಳು ಅನುಗ್ರಹ ಸಂದೇಶ ನೀಡಿ, ಕಲಿಯುಗದ ಕಾಮದೇನು ಕಲ್ಪವೃಕ್ಷ ಎಂದು ಕರೆಯಲು ಪಡುವ ಶ್ರೀ ರಾಘವೇಂದ್ರ ಸ್ವಾಮಿಗಳು ವೆಂಕಟೇಶ ದೇವರ ಅನುಗ್ರಹದಿಂದ ಜನಿಸಿ ಮಂತ್ರಾಲಯ ಕ್ಷೇತ್ರದಲ್ಲಿ ಸನಾತನ ಹಿಂದೂ ಧರ್ಮದ ರಕ್ಷಣೆಗೆ ಪೂರಕವಾಗಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ತಿರುಪತಿ ಮತ್ತು ಮಂತ್ರಾಲಯ ಕ್ಷೇತ್ರಗಳು ಸನಾತನ ಹಿಂದೂ ಧರ್ಮದ ಎರಡು ಪರಮ ಪವಿತ್ರ ಧರ್ಮ ತಾಣಗಳಾಗಿವೆ. ನಿರಂತರವಾಗಿ ಭಕ್ತರನ್ನು ಹರಸುತ್ತಾ ವೆಂಕಟೇಶ ದೇವರು ಹಾಗೂ ರಾಯರು ಕಲಿಯುಗದಲ್ಲಿ ಜನರ ಸಂಕಷ್ಟ ಕಳೆಯುವ ಕಾರ್ಯ ಮಾಡುತ್ತಿದೆ. ರಾಯರಿಗೆ ಭಕ್ತಿ ಎಷ್ಟು ಮುಖ್ಯವೋ, ಭಜನೆ ಸಹ ಅಷ್ಟು ಮುಖ್ಯವಾಗಿದೆ. ಭಗವಂತ ಸರ್ವ ವ್ಯಾಪ್ತಿಯಾಗಿದ್ದರು ಕೂಡ ತ್ರಿಧಾಮಗಳಲ್ಲಿ ಶ್ವೇತ ದೀಪಾ ಅನಂತಾಸರ ವೈಕುಂಠಗಳಲ್ಲಿ ವಿಶೇಷ ರೂಪವಾಗಿ ಬಂದಿದ್ದರು ಕೂಡಾ ನಾನು ವೈಕುಂಠದಲ್ಲಿ ವಾಸ ಮಾಡುವುದಿಲ್ಲ ಕೇವಲ ಭಕ್ತರು ಭಕ್ತಿ ಶ್ರದ್ದೆಯಲ್ಲಿ ನನ್ನನು ನಗೆಸುತ್ತಾರೆ ಅಲ್ಲಿಯೇ ಇರುವೆ ಎಂದಿದ್ದಾರೆ ಆದರಿಂದ ಭಕ್ತರು ನಗುವಿನಲ್ಲಿ ರಾಯರನ್ನು ಕಾಣಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಹೈಕೋಟ್‌ನ ನ್ಯಾಯಮೂರ್ತಿ ಶ್ರೀಶಾನಂದ, ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ, ಶ್ರೀಮಠದ ಆಡಳಿತ ವರ್ಗ, ಹಿರಿಯ ಅಧಿಕಾರಿಗಳು, ವಿದ್ವಾಂಸರು ಸೇರಿ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net