ತಸ್ತೀಕ್ ಹಣ ಬಿಡುಗಡೆ ಮಾಡಿ

ಮಾನ್ವಿಯಲ್ಲಿ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್‌ಗೆ ಹಿಂದೂ ದೇವಾಲಯಗಳ ಅರ್ಚಕರು, ಆಗಮಿಕರು, ಉಪಾಧಿವಂತರ ಒಕ್ಕೂಟದಿಂದ ಮನವಿ ಸಲ್ಲಿಸಿದರು.
ಮಾನ್ವಿಯಲ್ಲಿ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್‌ಗೆ ಹಿಂದೂ ದೇವಾಲಯಗಳ ಅರ್ಚಕರು, ಆಗಮಿಕರು, ಉಪಾಧಿವಂತರ ಒಕ್ಕೂಟದಿಂದ ಮನವಿ ಸಲ್ಲಿಸಿದರು.
Published on
ಮಾನ್ವಿ: ತಸ್ತೀಕ್ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತ ಹಿಂದೂ ದೇವಾಲಯಗಳ ಅರ್ಚಕರು, ಆಗಮಿಕರು, ಉಪಾಧಿವಂತರ ಒಕ್ಕೂಟದ ತಾಲೂಕು ಘಟಕ ಮಂಗಳವಾರ ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್‌ಗೆ ಮನವಿ ಸಲ್ಲಿಸಿತು.
ಒಕ್ಕೂಟದ ತಾಲೂಕು ಅಧ್ಯಕ್ಷ ಕಿಡಿಗಣ್ಣಯ್ಯಸ್ವಾಮಿ ಉಮಳಿಹೊಸೂರು ಮಾತನಾಡಿ,  ತಾಲೂಕಿನಲ್ಲಿರುವ ತಸ್ತೀಕ್ ಹಣ ಪಡೆಯುವ 78 ದೇವಸ್ಥಾನಗಳಲ್ಲಿ 58 ದೇವಸ್ಥಾನಗಳು ಮಾತ್ರ ಚಾಲ್ತಿಯಲ್ಲಿವೆ. ತಾಲೂಕಿನ ಪ್ರತಿ ದೇವಸ್ಥಾನಕ್ಕೂ ವಾರ್ಷಿಕವಾಗಿ ತಸ್ತೀಕ್ ಹಣ 72 ಸಾವಿರ ರೂ. ಜಮೆಯಾಗಬೇಕು. ಆದರೆ, 2025-26ನೇ ಸಾಲಿನಲ್ಲಿ 36 ದೇವಸ್ಥಾನಗಳಿಗೆ ಮೊದಲ ಕಂತು 36 ಸಾವಿರ ರೂ. ಮಾತ್ರ ಜಮಯಾಗಿದೆ. 
ಎರಡನೇ ಕಂತಿನ ಹಣವನ್ನು 29 ದೇವಸ್ಥಾನಗಳಿಗೆ ಮಾತ್ರ ಜಮಾ ಮಾಡಲಾಗಿದೆ. ಇನಾಂ ಮಂಜೂರಾತಿಯಲ್ಲಿರದ ದೇವಸ್ಥಾನಗಳನ್ನು ಪಟ್ಟಿಮಾಡಿ ಮಂಜೂರಾತಿ ನೀಡಿ ತಸ್ತೀಕ್ ಹಣ ಬಿಡುಗಡೆ ಮಾಡಬೇಕು. 
ಮುಜುರಾಯಿ ದೇವಸ್ಥಾನಗಳ ಅರ್ಚಕರು ಮೃತಪಟ್ಟಲ್ಲಿ ಅವರ ಕುಟುಂಬಕ್ಕೆ ಜೀವ ವಿಮೆ ಪರಿಹಾರ ನೀಡಬೇಕು. ಮಕ್ಕಳ ಶಿಕ್ಷಣಕ್ಕಾಗಿ ನೀಡುವ ಸೌಲಭ್ಯಗಳು ಹಾಗೂ ತೀರ್ಥಯಾತ್ರೆ ಕೈಗೊಳ್ಳುವುದಕ್ಕೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಫಲಕವನ್ನು ಅಳವಡಿಸಿ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಮಲ್ಲಪ್ಪ ಹೂಗಾರ, ಜಿಲ್ಲಾ ಕಾರ್ಯದರ್ಶಿ ದೊಡ್ಡಪ್ಪ ಹೂಗಾರ, ಜಗದೀಶಯ್ಯಸ್ವಾಮಿ ಮಲ್ಲಿಗೆ ಮಡುವು, ವೀರಭದ್ರಯ್ಯಸ್ವಾಮಿ, ಜಗದೀಶಯ್ಯಸ್ವಾಮಿ, ಚನ್ನಬಸವ, ಶಂಕ್ರಯ್ಯಸ್ವಾಮಿ, ಪಂಪಣ್ಣ ಹೂಗಾರ, ಹನುಮಂತ, ಮಲ್ಲಯ್ಯಸ್ವಾಮಿ, ಬಸಯ್ಯಸ್ವಾಮಿ, ಸಂಗಯ್ಯಸ್ವಾಮಿ, ಸಂಜೀವಯ್ಯ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net