ಸಿರವಾರದಲ್ಲಿ ಪಿಎಚ್‌ಸಿ ವೈದ್ಯರಾದ ಸುನೀಲ್ ಸರೋದೆ ಹಾಗೂ ಮೃತ್ಯುಂಜಯ್‌ಗೆ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮನವಿ ಸಲ್ಲಿಸಿತು. ಆಶಾಗಳಾದ ಶೈನಾಜಾ, ಜರೀನಾ, ದುರುಗಮ್ಮ, ಶಾಂತಮ್ಮ, ಯಮುನಮ್ಮ, ಸುಂದರಮ್ಮ, ರೇಣಮ್ಮ, ನಾಗರತ್ನಾ ಇತರರಿದ್ದರು.
ಸಿರವಾರ: ಬಾಕಿ ಐದು ತಿಂಗಳ ಪ್ರೋತ್ಸಾಹಧನ ಬಿಡುಗಡೆಗೆ ಆಗ್ರಹಿಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಸುನೀಲ್ ಸರೋದೆ ಹಾಗೂ ಮೃತ್ಯುಂಜಯ್‌ಗೆ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಆಶಾ ಕಾರ್ಯಕರ್ತೆಯರು ಹಗಲಿರುಳು ಸಾರ್ವಜನಿಕ ಆರೋಗ್ಯ ಸೇವೆ ಸಲ್ಲಿಸುತ್ತಿದ್ದರೂ ಪ್ರೋತ್ಸಾಹ ಧನವು ನಿಗದಿತ ಅವಧಿಯೊಳಗೆ ಪಾವತಿಯಾಗುತ್ತಿಲ್ಲ. ಅಷ್ಟೇ ಅಲ್ಲದೆ ಬಹುತೇಕ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ನಿಶ್ಚಿತ ಗೌರವಧನವೂ ಸರಿಯಾಗಿ ಕೈಸೇರುತ್ತಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಮಂಗಳವಾರ ಅನಿರ್ದಿಷ್ಟಾವಧಿ ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡುವುದಾಗಿ ಟಿಎಚ್‌ಒಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.