ಗ್ರಾೃಚುಟಿ ಹಣ ಬಿಡುಗಡೆ ಮಾಡಿ

ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ರಾಜ್ಯ ನಿವೃತ್ತ ಅಂಗನವಾಡಿ ನೌಕರರ ಸಂಘ ಮನವಿ ಸಲ್ಲಿಸಿತು. ಸಂಘದ ಅಧ್ಯಕ್ಷೆ ಮಲ್ಲಮ್ಮ ಹೊನ್ನಳ್ಳಿ, ಉಪಾಧ್ಯಕ್ಷೆ ಅನಸೂಯಾ ಮಸ್ಕಿ, ಮುಕ್ತಾಯಮ್ಮ ಸಂತೆಕೆಲ್ಲೂರು, ರಸೂಲ್‌ಬಿ ಇದ್ದರು.
ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ರಾಜ್ಯ ನಿವೃತ್ತ ಅಂಗನವಾಡಿ ನೌಕರರ ಸಂಘ ಮನವಿ ಸಲ್ಲಿಸಿತು. ಸಂಘದ ಅಧ್ಯಕ್ಷೆ ಮಲ್ಲಮ್ಮ ಹೊನ್ನಳ್ಳಿ, ಉಪಾಧ್ಯಕ್ಷೆ ಅನಸೂಯಾ ಮಸ್ಕಿ, ಮುಕ್ತಾಯಮ್ಮ ಸಂತೆಕೆಲ್ಲೂರು, ರಸೂಲ್‌ಬಿ ಇದ್ದರು.
Published on
ಲಿಂಗಸುಗೂರು: ಗ್ರಾೃಚುಟಿ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ರಾಜ್ಯ ನಿವೃತ್ತ ಅಂಗನವಾಡಿ ನೌಕರರ ಸಂಘದಿಂದ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿಗೆ ಶುಕ್ರವಾರ ಸಲ್ಲಿಸಲಾಯಿತು.
ಸೇವೆಯಿಂದ 2011ರಿಂದ 2023ರ ಅವಧಿಯೊಳಗೆ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಉಪಜೀವನಕ್ಕೆ ತೊಂದರೆಯಾಗಿದೆ. ಗ್ರಾೃಚುಟಿ ಹಣ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಹಿಂದೆ ಹೋರಾಟ ನಡೆಸಿದ್ದ ಸಮಯದಲ್ಲಿ ಭರವಸೆ ನೀಡಿತ್ತು. ಮನವಿಯನ್ನು ಮರು ಪರಿಶೀಲಿಸಿ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷೆ ಮಲ್ಲಮ್ಮ ಹೊನ್ನಳ್ಳಿ, ಉಪಾಧ್ಯಕ್ಷೆ ಅನಸೂಯಾ ಮಸ್ಕಿ, ಮುಕ್ತಾಯಮ್ಮ ಸಂತೆಕೆಲ್ಲೂರು, ರಸೂಲ್‌ಬಿ, ಗಂಗಮ್ಮ, ನೀಲಮ್ಮ ಮಸ್ಕಿ, ಶಂಕ್ರಮ್ಮ ನೀರಲಕೇರಿ, ಲಕ್ಷ್ಮೀ ನಾಗಲಾಪುರ, ಲಕ್ಷ್ಮೀಬಾಯಿ ಜಲದುರ್ಗ, ದುರುಗಮ್ಮ ಮಸ್ಕಿ, ಗಂಗಮ್ಮ ಚಿತ್ರನಾಳ, ಮುಖಂಡ ಮಲ್ಲನಗೌಡ ಪಾಟೀಲ್, ಸಂಗಯ್ಯಸ್ವಾಮಿ ಚಿಂಚರಕಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net