ದ್ವೇಷಭಾಷಣ ಮಸೂದೆ ತಿರಸ್ಕರಿಸಿ

ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ಗೆ ಶಾಸಕಿ ಕರೆಮ್ಮ ನಾಯಕ ನೇತೃತ್ವದ ಜೆಡಿಎಸ್ ನಿಯೋಗ ಮನವಿ ಸಲ್ಲಿಸಿತು.ಶಾಸಕರಾದ ನೇಮಿರಾಜ್ ನಾಯ್ಕ, ಶಾರದಾ ಪೂರ್ಣನಾಯ್ಕ, ಸ್ವರೂಪ್, ಹರೀಶಗೌಡ, ಬಾಲಕೃಷ್ಣ, ಮಾಜಿ ಸಚಿವ ವೆಂಕಟರಾಯ ನಾಡಗೌಡ ಇತರರಿದ್ದರು.
ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ಗೆ ಶಾಸಕಿ ಕರೆಮ್ಮ ನಾಯಕ ನೇತೃತ್ವದ ಜೆಡಿಎಸ್ ನಿಯೋಗ ಮನವಿ ಸಲ್ಲಿಸಿತು.ಶಾಸಕರಾದ ನೇಮಿರಾಜ್ ನಾಯ್ಕ, ಶಾರದಾ ಪೂರ್ಣನಾಯ್ಕ, ಸ್ವರೂಪ್, ಹರೀಶಗೌಡ, ಬಾಲಕೃಷ್ಣ, ಮಾಜಿ ಸಚಿವ ವೆಂಕಟರಾಯ ನಾಡಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಪಾಲರಿಗೆ ಶಾಸಕಿ ಕರೆಮ್ಮ ನೇತೃತ್ವದ ಜೆಡಿಎಸ್ ನಿಯೋಗ ಮನವಿ
ದೇವದುರ್ಗ: ರಾಜ್ಯ ಸರ್ಕಾರ ದ್ವೇಷ ಭಾಷಣ ಮಸೂದೆಯನ್ನು ಚರ್ಚೆ ಮಾಡದೆ ಪಾಸ್ ಮಾಡಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ಗೆ ಶಾಸಕಿ ಕರೆಮ್ಮ ಜಿ.ನಾಯಕ ನೇತೃತ್ವದ ಜೆಡಿಎಸ್ ನಿಯೋಗ ಬುಧವಾರ ಮನವಿ ಸಲ್ಲಿಸಿತು.
ಶಾಸಕಿ ಕರೆಮ್ಮ ನಾಯಕ ಮಾತನಾಡಿ, ರಾಜ್ಯ ಸರ್ಕಾರ ದ್ವೇಷ ಭಾಷಣ ಮಸೂದೆಯನ್ನು ಸದನದಲ್ಲಿ ಮಂಡಿಸಿ ಚರ್ಚಿಸದೆ ಏಕಪಕ್ಷೀಯವಾಗಿ ಮಸೂದೆ ಪಾಸ್ ಮಾಡಿದೆ. ಆ ಮೂಲಕ ಜನರ ವಾಕ್ ಸ್ವಾತಂತ್ರ್ಯ ಕಸಿದುಕೊಂಡಿದೆ. ಕಾಯ್ದೆಯಿಂದ ವಿಪಕ್ಷಗಳ ಧ್ವನಿ ಅಡಗಿಸುವ ಕುತಂತ್ರ ನಡೆಸಿದೆ. ಮೂರು ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಜನರನ್ನು ಮರಳುಮಾಡಿ ಆಡಳಿತ ನಡೆಸುತ್ತಿದೆ. ವಿವಿಧ ವಸ್ತುಗಳ ಬೆಲೆ ಏರಿಕೆ ಮಾಡಿ ಜನರಿಗೆ ಗಾಯದ ಮೇಲೆ ಬರೆ ಎಳೆದಿದೆ ಎಂದು ವಾಗ್ದಾಳಿ ನಡೆಸಿದರು.
ಕಲಬುರಗಿ, ಬೀದರ್, ಯಾದಗಿರಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಬೆಳೆಗಳು ನಾಶವಾಗಿದ್ದರೂ ಸರ್ಕಾರ ಸೂಕ್ತ ಪರಿಹಾರ ನೀಡಲು ವಿಫಲವಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಸಿದ್ದರೂ ಮುಖ್ಯಮಂತ್ರಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿಲ್ಲ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಸರ್ಕಾರಕ್ಕೆ ಚಾಟಿ ಬೀಸಬೇಕು. ದ್ವೇಷ ಭಾಷಣ ಮಸೂದೆ ತಿರಸ್ಕಾರ ಮಾಡಬೇಕು ಎಂದು ಒತ್ತಾಯಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net