ಪೌರ ಕಾರ್ಮಿಕರ ಪರಿಶ್ರಮ ಗುರುತಿಸಿ ಗೌರವಿಸಿ

ಸಿಂಧನೂರಿನಲ್ಲಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
ಸಿಂಧನೂರಿನಲ್ಲಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
Published on

ಸಿಂಧನೂರು: ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ಅಭಿಯಾನ ಅಂಗವಾಗಿ ನಗರದ ಮಸೀದಿ ಹುದಾದಲ್ಲಿ ಜಮಾತೆ ಇಸ್ಲಾಮಿ ಹಿಂದ್ ವತಿಯಿಂದ ಬುಧವಾರ ಪೌರಕಾರ್ಮಿಕರನ್ನು ಗೌರವಿಸಲಾಯಿತು.

ಜಮಾತೆ ಇಸ್ಲಾಮಿ ಹಿಂದ್ ಸ್ಥಳೀಯ ಘಟಕದ ಅಧ್ಯಕ್ಷ ಹುಸೇನ್ ಸಾಬ್ ಮಾತನಾಡಿ, ನಗರದ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಅವರ ಪರಿಶ್ರಮವನ್ನು ಸಮಾಜ ಗುರುತಿಸಿ ಗೌರವಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಹುಸೇನ್ ಬಾಷಾಸಾಬ್ ಮಾತನಾಡಿ, ಪ್ರವಾದಿ ಮುಹಮ್ಮದ್ ಅವರ ಜೀವನ ಮತ್ತು ಬೋಧನೆಗಳು ಮಾನವೀಯತೆ, ಗೌರವ ಹಾಗೂ ಸೇವಾ ಮನೋಭಾವಕ್ಕೆ ಪ್ರೇರಣೆಯಾಗಿವೆ. ಸಮಾಜಕ್ಕೆ ಸೇವೆ ಸಲ್ಲಿಸುವ ಪೌರಕಾರ್ಮಿಕರನ್ನು ಗೌರವಿಸುವುದು ಇದೇ ಮೌಲ್ಯಗಳನ್ನು ಅನುಸರಿಸುವ ಕಾರ್ಯವಾಗಿದೆ ಎಂದರು.
ಪೌರಕಾರ್ಮಿಕ ಮೌನೇಶ್ ಮೇಸ್ತ್ರಿ ಮಾತನಾಡಿ, ಪೌರಕಾರ್ಮಿಕರನ್ನು ಗುರುತಿಸಿ ಗೌರವಿಸಿರುವುದು ಸಂತೋಷದ ವಿಚಾರವಾಗಿದೆ. ಇಂತಹ ಕಾರ್ಯಕ್ರಮಗಳು ಕಾರ್ಮಿಕರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರೊಂದಿಗೆ ಸಮಾಜದಲ್ಲಿ ಗೌರವ ಮತ್ತು ಮಾನವೀಯತೆ ಬೆಳೆಸುವಲ್ಲಿ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಸೀರತ್ ಅಭಿಯಾನ ಸ್ವಾಗತ ಸಮಿತಿ ಸದಸ್ಯ ವಲಿ ಸಾಬ್ ಮಿಟ್ಟಿಮಣಿ, ಸಹ ಸಂಚಾಲಕ ಖಾಜಿ ಜಾವೀದ್ ಸಾಹೇಬ್, ನೂರ್ ಖಾನ್ ಸಾಹೇಬ್, ನಯೀಮ್ ಚೌಧರಿ, ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಅಧ್ಯಕ್ಷೆ ಸುಮಯ್ಯ ಬೇಗಂ, ಉಪಾಧ್ಯಕ್ಷೆ ಲುಬ್ನಾ ಬೆಳಗಾಮಿ, ಮೌಲಾನಾ ಮೆಹರಾಜ್ ಅಹ್ಮದ್ ಖಾದ್ರಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net