ಪುಸ್ತಕ ಓದುವುದರಿಂದ ಜ್ಞಾನವೃದ್ಧಿ

ಲಿಂಗಸುಗೂರಿನಲ್ಲಿ ಕಥೆಗಾರ ಶರಣಬಸವ ಗುಡದಿನ್ನಿ ಅವರ ಮನೆಯಲ್ಲಿ ಗ್ರಂಥಾಲಯವನ್ನು ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಉದ್ಘಾಟಿಸಿದರು.
ಲಿಂಗಸುಗೂರಿನಲ್ಲಿ ಕಥೆಗಾರ ಶರಣಬಸವ ಗುಡದಿನ್ನಿ ಅವರ ಮನೆಯಲ್ಲಿ ಗ್ರಂಥಾಲಯವನ್ನು ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಉದ್ಘಾಟಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿಕೆ
  • ಮನೆಗೊಂದು ಗ್ರಂಥಾಲಯ ಉದ್ಘಾಟನೆ
ಲಿಂಗಸುಗೂರು: ಪುಸ್ತಕ ಓದುವ ಅಭಿರುಚಿ ಜ್ಞಾನವನ್ನು ಹೆಚ್ಚಿಸುತ್ತದೆ. ಪುಸ್ತಕ ಕೊಂಡು ಓದುವ ಹವ್ಯಾಸ ರೂಢಿಸುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯ ಯೋಜನೆ ಜಾರಿಗೆ ತಂದಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಿಲ್ಲಾ ಗ್ರಂಥಾಲಯ ಜಾಗೃತ ಸಮಿತಿ ಸಹಯೋಗದಲ್ಲಿ ಲಿಂಗಸುಗೂರಿನ ಕಥೆಗಾರ ಶರಣಬಸವ ಗುಡದಿನ್ನಿ ಅವರ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಉದ್ಘಾಟಿಸಿ ಬುಧವಾರ ಮಾತನಾಡಿದರು.
 ನಮ್ಮ ಹಿರಿಯರು ದೇವರು ಪರಿಕಲ್ಪನೆಗೆ ಮಹತ್ವ ನೀಡಿ ಭಕ್ತಿ ಪ್ರಧಾನ ಜೀವನ ಸಂಸ್ಕೃತಿ ಬೆಳೆಸಿದರು. ಈಗ ನಾವು ದೇವರಿಗೆ ಅಗರಬತ್ತಿ, ಅರಿಶಿಣ, ಕುಂಕುಮ, ಕರ್ಪೂರವನ್ನು ಭಕ್ತಿಯಿಂದ ಕೊಳ್ಳುವಂತೆ ಪುಸ್ತಕಗಳನ್ನು ಪ್ರೀತಿಯಿಂದ ಕೊಂಡು ಓದಿ ಜ್ಞಾನ ಸಂಸ್ಕೃತಿಯನ್ನು ಬೆಳೆಸಬೇಕು.
 ಕನ್ನಡ ಪುಸ್ತಕ ಪ್ರಾಧಿಕಾರ ಕಳೆದ ವರ್ಷದಿಂದ ಮನೆಗೊಂದು ಗ್ರಂಥಾಲಯ ಯೋಜನೆ ಜಾರಿಗೊಳಿಸಿದೆ ರಾಜ್ಯದ ಉದ್ದಗಲಕ್ಕೂ ಒಂದು ಲಕ್ಷ ಮನೆಗೊಂದು ಗ್ರಂಥಾಲಯ ಸ್ಥಾಪಿಸುವ ಗುರಿಹೊಂದಲಾಗಿದೆ. ಓದುಗರು ಪ್ರಾಧಿಕಾರದೊಂದಿಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಕಥೆಗಾರ ಶರಣಬಸವ ಗುಡದಿನ್ನಿ, ಕಸಾಪ ತಾಲೂಕಾಧ್ಯಕ್ಷ ಡಾ.ಮಹಾದೇವಪ್ಪ ನಾಗರಾಳ, ಸಾಹಿತಿ ಪ್ರಕಾಶ ಬಿ. ಜಾಲಹಳ್ಳಿ, ಗುಂಡುರಾವ್ ದೇಸಾಯಿ, ಉಪನ್ಯಾಸಕ ಬಾಲಪ್ಪ ವಾಂಕಡೋತ್, ಕಣ್ಮೇಶ ಚಿತ್ತಾಪುರ, ಶಿಕ್ಷಕ ಚಿದಾನಂದ ನಾಯಕ, ಜಮದಗ್ನಿ, ನಾಗಪ್ಪ ಜಿ, ಸನಾವುಲ್ಲಾ, ರುದ್ರಮುನಿ, ಮಾನಪ್ಪ, ನಬೀಸಾಬ್, ಮಾನಪ್ಪ ಬಡಿಗೇರ್ ಇದ್ದರು   
ಫೋಟೋ : 14-ಎಲ್‌ಎನ್‌ಜಿ-04 
ಲಿಂಗಸುಗೂರಿನಲ್ಲಿ ಕಥೆಗಾರ ಶರಣಬಸವ ಗುಡದಿನ್ನಿ ಅವರ ಮನೆಯಲ್ಲಿ ಗ್ರಂಥಾಲಯವನ್ನು ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಉದ್ಘಾಟಿಸಿದರು. ಕಸಾಪ ತಾಲೂಕಾಧ್ಯಕ್ಷ ಡಾ.ಮಹಾದೇವಪ್ಪ ನಾಗರಾಳ, ಸಾಹಿತಿ ಪ್ರಕಾಶ ಬಿ. ಜಾಲಹಳ್ಳಿ, ಗುಂಡುರಾವ್ ದೇಸಾಯಿ, ಉಪನ್ಯಾಸಕ ಬಾಲಪ್ಪ ವಾಂಕಡೋತ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net