ಹಡಪದ ಅಪ್ಪಣ ಮೂರ್ತಿ ಮರು ಪ್ರತಿಷ್ಠಾಪಿಸಿ

ಲಿಂಗಸುಗೂರಿನಲ್ಲಿ ಎಸಿ ಕಚೇರಿಯ ಎಫ್‌ಡಿಎ ಅನುಪಮಾ ಸಿಂಗ್‌ಗೆ ಹಡಪದ ಸಮಾಜ ಸೇವಾ ಸಂಘ ಮನವಿ ಸಲ್ಲಿಸಿತು.
ಲಿಂಗಸುಗೂರಿನಲ್ಲಿ ಎಸಿ ಕಚೇರಿಯ ಎಫ್‌ಡಿಎ ಅನುಪಮಾ ಸಿಂಗ್‌ಗೆ ಹಡಪದ ಸಮಾಜ ಸೇವಾ ಸಂಘ ಮನವಿ ಸಲ್ಲಿಸಿತು.
Published on
ಲಿಂಗಸುಗೂರು: ಬೀದರ್ ಜಿಲ್ಲೆ ಬಸವಕಲ್ಯಾಣದ ತ್ರಿಪುರಾಂತಕ ಕೆರೆ ಹತ್ತಿರದ ಅರಿವಿನ ಗವಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣ ಮೂರ್ತಿಯನ್ನು ಮರು ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿ ಹಡಪದ ಸಮಾಜ ಸೇವಾ ಸಂಘದಿಂದ ಮಂಗಳವಾರ ಎಸಿ ಕಚೇರಿಯ ಎಫ್‌ಡಿಎ ಅನುಪಮಾ ಸಿಂಗ್‌ಗೆ ಮನವಿ ಸಲ್ಲಿಸಲಾಯಿತು. 
ತ್ರಿಪುರಾಂತಕ ಕೆರೆ ಪ್ರದೇಶದಲ್ಲಿ 12ನೇ ಶತಮಾನದ ಬಸವಾದಿ ಶರಣರ ಅನೇಕ ಅರಿವಿನ ಗವಿಗಳು ಅಸ್ತಿತ್ವದಲ್ಲಿವೆ. ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ ಅವರ ಗವಿಯೂ ಅಲ್ಲಿದೆ. ಆದರೆ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ಅವರು ಹಸ್ತಕ್ಷೇಪಮಾಡಿ ಅನ್ಯ ಶರಣರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಇತಿಹಾಸ ತಿರುಚುವ ಕಾರ್ಯವಾಗಿದೆ.
ಇದರಿಂದ ಹಡಪದ ಅಪ್ಪಣ್ಣನವರ ಭಕ್ತರು, ಸಮುದಾಯದವರ ಭಾವನೆಗೆ ಧಕ್ಕೆ ಉಂಟಾಗಿದೆ. ಕೂಡಲೇ ಪಂಚಕಮಿಟಿ ಪದಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳದಲ್ಲಿ ಹಡಪದ ಅಪ್ಪಣ್ಣ ಮೂರ್ತಿ ಮರು ಪ್ರತಿಷ್ಠಾಪನೆ ಮಾಡಬೇಕೆಂದು ಒತ್ತಾಯಿಸಿದರು. 
ಸಂಘದ ರಾಜ್ಯಾಧ್ಯಕ್ಷ ಗದ್ದೆಪ್ಪ ಜಕ್ಕೇರಮಡು, ತಾಲೂಕಾಧ್ಯಕ್ಷ ಜಗನ್ನಾಥ ಚಿತ್ತಾಪುರ, ಪ್ರ.ಕಾರ್ಯದರ್ಶಿ ಶರಣಬಸವ ಈಚನಾಳ, ಉಪಾಧ್ಯಕ್ಷ ಮುತ್ತಣ್ಣ ಗುಡಿಹಾಳ, ಬಸವರಾಜ ಯಲಗಟ್ಟಿ, ಸತೀಶ ಕರಡಕಲ್ಲ, ತಿಪ್ಪಣ್ಣ, ಮಂಜುನಾಥ, ವೀರೇಶ, ಮೌನೇಶ, ಆದೇಶ, ಪರಮಣ್ಣ, ಮಲ್ಲಿಕಾರ್ಜುನ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net